ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್ನರ ವಾಪಸು ಕಳುಹಿಸುವ 2ನೇ ಹಂತದ ಕಾರ್ಯ ಶೀಘ್ರ: ಪಾಕಿಸ್ತಾನ

Published 25 ಮಾರ್ಚ್ 2024, 13:41 IST
Last Updated 25 ಮಾರ್ಚ್ 2024, 13:41 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ದೇಶದಲ್ಲಿರುವ ಅಫ್ಗಾನಿಸ್ತಾನ ನಿರಾಶ್ರಿತರನ್ನು ವಾಪಸು ಕಳುಹಿಸುವ 2ನೇ ಹಂತದ ಕಾರ್ಯಾಚರಣೆಗೆ ಪಾಕಿಸ್ತಾನ ಸಿದ್ಧತೆ ನಡೆಸಿದೆ. 2ನೇ ಹಂತದಲ್ಲಿ 10 ಲಕ್ಷ ಅಫ್ಗನ್ನರನ್ನು ವಾಪಸು ಕಳುಹಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ದೇಶದಲ್ಲಿ ನೆಲೆಸಿರುವ ಅಫ್ಗನ್ನರ ದಾಖಲೆ ಸಿದ್ಧಪಡಿಸಲು ಒಳಾಡಳಿತ ಸಚಿವಾಲಯವು ಈಗಾಗಲೇ ಎರಡು ಜಿಲ್ಲಾಡಳಿತ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಅಫ್ಗನ್ ಪೌರತ್ವ ಗುರುತಿನಪತ್ರ ಉಳ್ಳವರ ಅಂಕಿಅಂಶಗಳನ್ನು ಜಿಲ್ಲಾಡಳಿತದ ಮಂದಿ, ಪೊಲೀಸರು ಈಗಾಗಲೇ ಸಂಗ್ರಹಿಸುತ್ತಿದ್ದಾರೆ.

ಮಾಹಿತಿ ಕಲೆಹಾಕಲು ಮಾರ್ಚ್‌ 25ರ ವರೆಗೆ ಗಡುವು ನೀಡಲಾಗಿದ್ದು, ಈ ಪ್ರಕ್ರಿಯೆ ಬಹುತೇಕ ಮುಗಿದಿದೆ ಎಂದು ಅಧಿಕಾರಿಗಳ ಮೂಲ ಉಲ್ಲೇಖಿಸಿ ‘ದ ಡಾನ್‌’ ವರದಿ ಮಾಡಿದೆ.

ಅಫ್ಗನ್ನರನ್ನು ವಾಪಸು ಕಳುಹಿಸುವ ಮೊದಲ ಹಂತದ ಕಾರ್ಯಾಚರಣೆಯನ್ನು ಪಾಕಿಸ್ತಾನ ಕಳೆದ ವರ್ಷ ನವೆಂಬರ್‌ನಲ್ಲಿ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT