ವ್ಯಾಟಿಕನ್ ಸಿಟಿ: ಪೋಪ್ ನಿಧನವಾದ 15 ಅಥವಾ 20 ದಿನಗಳ ಬಳಿಕ ಮುಂದಿನ ಪೋಪ್ನ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತವೆ

lತಮ್ಮ ಆಡಳಿತಕ್ಕೆ ಸೂಕ್ತ ಸಲಹೆ–ಸೂಚನೆಗಳನ್ನು ನೀಡಲು, ಪೋಪ್ ಅವರು ಸಮಾಲೋಚನಾ ಸಮಿತಿಯೊಂದನ್ನು ರಚಿಸುತ್ತಾರೆ. ವಿವಿಧ ದೇಶಗಳ ಬಿಷಪ್ಗಳನ್ನು ಕಾರ್ಡಿನಲ್ಗಳನ್ನಾಗಿ ಈ ಸಮಿತಿಗೆ ನೇಮಿಸಲಾಗುತ್ತದೆ. ಈ ಸಮಿತಿಯೇ ಮುಂದಿನ ಪೋಪ್ ಅನ್ನು ಆಯ್ಕೆ ಮಾಡುತ್ತದೆ

lಧರ್ಮದೀಕ್ಷೆ ಪಡೆದ ರೋಮನ್ ಕ್ಯಾಥೋಲಿಕ್ ಸಮುದಾಯದ ವ್ಯಕ್ತಿಯೂ ಪೋಪ್ ಆಗಬಹುದು. ಆದರೆ, ಹಲವು ಶತಮಾನಗಳಿಂದ ಕಾರ್ಡಿನಲ್ಗಳಲ್ಲೇ ಒಬ್ಬರು ಆಯ್ಕೆಯಾಗುತ್ತಿದ್ದಾರೆ

ಆಯ್ಕೆ ಪ್ರಕ್ರಿಯೆ ಹೇಗೆ?

ಪೋಪ್ ಆಯ್ಕೆಗಾಗಿ ಸಂತಾ ಮಾರ್ತಾನಲ್ಲಿ ಕಾರ್ಡಿನಲ್ಗಳ ಚರ್ಚೆಗಳು ನಡೆಯುತ್ತವೆ. ಸಿಸ್ಟೀನ್ ಛಾಪೆಲ್ನಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಸಂತಾ ಮಾರ್ತಾವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಕಾರ್ಡಿನಲ್ಗಳು ಹೊರ ಜಗತ್ತಿನ ಸಂಪರ್ಕವನ್ನು ಕಡಿದುಕೊಳ್ಳಬೇಕಾಗುತ್ತದೆ. ಮುಂದಿನ ಪೋಪ್ನ ಗುಣಲಕ್ಷಣಗಳು ಏನಿರಬೇಕು? ಚರ್ಚ್ ಮುಂದೆ ಇರುವ ಸವಾಲುಗಳೇನು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತವೆ. ಎಲ್ಲ ಕಾರ್ಡಿನಲ್ಗಳು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಚರ್ಚೆಯಲ್ಲಿ ಯಾರು ಹೇಗೆ ಮಾತನಾಡುತ್ತಾರೆ, ಅವರ ಧಾರ್ಮಿಕ ಜ್ಞಾನ, ಪಾಂಡಿತ್ಯಗಳ ಆಧಾರದಲ್ಲಿ ಕಾರ್ಡಿನಲ್ಗಳು ಅವರಲ್ಲೇ ಒಬ್ಬರನ್ನು ಆಯ್ಕೆ ಮಾಡುತ್ತಾರೆ.

ಹಲವು ದಿನಗಳವರೆಗೆ ಈ ಪ್ರಕ್ರಿಯೆ ನಡೆಯಲಿದೆ. ಯಾವುದೇ ವ್ಯಕ್ತಿಗೆ ಮೂರನೇ ಎರಡರಷ್ಟು ಮತಗಳು ದೊರಕುವವರೆಗೂ ಪ್ರತಿನಿತ್ಯವೂ ಎರಡು ಬಾರಿ ಮತದಾನ ನಡೆಯಲಿದೆ. ಈ ಎಲ್ಲ ಪ್ರಕ್ರಿಯೆಗಳು ಬಹಳ ರಹಸ್ಯವಾಗಿ ನಡೆಯುತ್ತವೆ. ಪ್ರತಿ ಬಾರಿ ಮತದಾನ ನಡೆದ ಬಳಿಕ ಫಲಿತಾಂಶವನ್ನು ಬಹಿರಂಗ ಮಾಡಲಾಗುತ್ತದೆ. ಬಹುಮತ ಪಡೆದರೆ, ಫಲಿತಾಂಶ ಬಂದ ಒಂದು ಗಂಟೆಯ ಒಳಗೆ ನೂತನ ಪೋಪ್, ತಮ್ಮ ನಿವಾಸದ ಬಾಲ್ಕನಿಯಿಂದ ಕೈಬೀಸುತ್ತಾರೆ.

ಮುಂದಿನ ಪೋಪ್ ಯಾರಾಗಬಹುದು?

lಕಾರ್ಡಿನಲ್ ಪಿಯೆಟ್ರೊ ಪಾರೊಲಿನ್, ಇಟಲಿ

lಕಾರ್ಡಿನಲ್ ಮಾರ್ಕ್ ಒಲೆಟ್, ಕೆನಡಾ

lಕಾರ್ಡಿನಲ್ ಕ್ರಿಸ್ಟೊಫ್ ಶೌನ್ಬೋರ್ನ್, ಆಸ್ಟ್ರಿಯಾ

lಕಾರ್ಡಿನಲ್ ಲೂಯಿಸ್ ಟ್ಯಾಗಲ್, ಫಿಲಿಪ್ಪೀನ್ಸ್

lಕಾರ್ಡಿನಲ್ ಮ್ಯಾಟೊ ಜುಪ್ಪಿ, ಇಟಲಿ

ಕಪ್ಪು ಮತ್ತು ಬಿಳಿ ಹೊಗೆ ಎಂಬ ಸಂಕೇತ

ನೂತನ ಪೋಪ್ ಆಯ್ಕೆಯ ಬಗ್ಗೆ ಪ್ರತಿನಿತ್ಯವೂ ಜನರಿಗೆ ಮಾಹಿತಿ ನೀಡಲಾಗುತ್ತದೆ. ಇದಕ್ಕಾಗಿ ಕಪ್ಪು ಮತ್ತು ಬಳಿ ಹೊಗೆಗಳೆಂಬ ಸಂಕೇತಗಳನ್ನು ರೂಪಿಸಿಕೊಳ್ಳಲಾಗಿದೆ. ಸಿಸ್ಟೀನ್ ಛಾಪೆಲ್ ಕಟ್ಟಡದಲ್ಲಿರುವ ಚಿಮಿಣಿಯ ಮೂಲಕ ಈ ಸಂಕೇತವನ್ನು ರವಾನಿಸಲಾಗುತ್ತದೆ. ಪೋಪ್ ಆಯ್ಕೆ ಪ್ರಕ್ರಿಯೆ ಪೂರ್ಣವಾಗಲಿಲ್ಲ ಎಂದರೆ, ಕಪ್ಪು ಹೊಗೆಯನ್ನು ಹೊರಸೂಸಲಾಗುತ್ತದೆ. ನೂತನ ಪೋಪ್ ಆಯ್ಕೆ ಪೂರ್ಣಗೊಂಡರೆ, ಬಿಳಿ ಹೊಗೆ ಬಿಡಲಾಗುತ್ತದೆ.

ಮತದಾನ ಪ್ರಕ್ರಿಯೆಯು ರಹಸ್ಯವಾಗಿ ನಡೆಯುತ್ತದೆ. ಆದ್ದರಿಂದ ಪ್ರತಿಬಾರಿ ಮತದಾನ ನಡೆದು ಫಲಿತಾಂಶ ಬಹಿರಂಗಗೊಂಡ ಬಳಿಕ ಮತಪತ್ರಗಳನ್ನು ಸುಡಲಾಗುತ್ತದೆ. ಪ್ರತಿನಿತ್ಯವೂ ಹೊಗೆಯ ಸಂಕೇತವನ್ನು ನೀಡಬೇಕಾಗಿರುವುದರಿಂದ ಮತಪತ್ರಗಳನ್ನೂ ಸುಡಲಾಗುತ್ತದೆ. ಸಾಂಪ್ರದಾಯಿಕವಾಗಿ ಕಪ್ಪು ಹೂಗೆ ಮೂಡಿಸಲು, ಮತಪತ್ರಗಳ ಜೊತೆಯಲ್ಲಿ ಒಣ ಹುಲ್ಲುಗಳನ್ನು ಸುಡಲಾಗುತ್ತಿತ್ತು. ಬಿಳಿ ಹೊಗೆಗಾಗಿ ಹಸಿ ಹಲ್ಲು ಬಳಸಲಾಗುತ್ತಿತ್ತು. ಆಧುನಿಕ ಯುಗದಲ್ಲಿ ರಾಸಾಯನಿಕಗಳನ್ನು ಬಳಸಿ ಹೊಗೆಯನ್ನು ಮೂಡಿಸಲಾಗುತ್ತದೆ.
.Pope Francis | ದೀನದಲಿತರಿಗೆ ಪೋಪ್ ಭರವಸೆಯ ಬೆಳಕಾಗಿದ್ದರು: ಪ್ರಧಾನಿ ಮೋದಿ.PHOTOS | ಪೋಪ್ ಫ್ರಾನ್ಸಿಸ್ ನಿಧನ; 88 ವರ್ಷಗಳ ಸಾರ್ಥಕ ಪಯಣ.Pope Francis: ಪೋಪ್ ನಿಧನದ ಬಳಿಕದ ಪ್ರಕ್ರಿಯೆಗಳು ಹೇಗಿರುತ್ತವೆ?.ಪೋಪ್ ಫ್ರಾನ್ಸಿಸ್ ನಿಧನ: ಸಂಪ್ರದಾಯಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದ ಸುಧಾರಣಾವಾದಿ.ಧಾರ್ಮಿಕ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೊರತು ಶಾಂತಿ ಅಸಾಧ್ಯ: ಪೋಪ್ ಫ್ರಾನ್ಸಿಸ್.ಪೋಪ್ ಫ್ರಾನ್ಸಿಸ್ ನಿಧನ: ಬೆಳ್ತಂಗಡಿ ಧರ್ಮಪ್ರಾಂತ್ಯ ಸಂತಾಪ.
ಪೋಪ್ ಆಗಲು ಅರ್ಹತೆ ಏನು?

ಪೋಪ್ ಅಭ್ಯರ್ಥಿಯು ಬ್ಯಾಪ್ಟೈಜ್ (ಬ್ಯಾಪ್ಟಿಸಮ್ ಆಚರಣೆಯ ಮೂಲಕ ಕ್ರಿಶ್ಚಿಯನ್ ಎಂದು ಔಪಚಾರಿಕವಾಗಿ ಗುರುತಿಸಲ್ಪಟ್ಟವರು) ಮಾಡಿದ ರೋಮನ್ ಕ್ಯಾಥೋಲಿಕ್ ಪುರುಷ ಆಗಿರಬೇಕು.

ಆಯ್ಕೆ ಮಾಡುವವರು ಯಾರು?

ಹಿರಿಯ ಕ್ಯಾಥೋಲಿಕ್ ಪಾದ್ರಿಗಳನ್ನು ಒಳಗೊಂಡಿರುವ ಕಾರ್ಡಿನಲ್ಸ್ ಕಾಲೇಜು ಮುಂದಿನ ಪೋಪ್ ಅನ್ನು ಆಯ್ಕೆ ಮಾಡುತ್ತದೆ. ಮತ ಪತ್ರದ ಮೂಲಕ ನೂತನ ಪೋಪ್ ಆಯ್ಕೆ ನಡೆಯುತ್ತದೆ.

ಆರಂಭಿಕ ಪ್ರಾರ್ಥನೆ ಬಳಿಕ ಮಧ್ಯಾಹ್ನ ಸಿಸ್ಟೀನ್ ಚಾಪೆಲ್ನಲ್ಲಿ ಮೊದಲ ಮತದಾನ ನಡೆಸಲಾಗುತ್ತದೆ. ಪೋಪ್ ಆಯ್ಕೆಯಾಗದಿದ್ದರೆ, ನಂತರದ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಮಧ್ಯಾಹ್ನ ತಲಾ ಎರಡು ಮತದಾನ ನಡೆಸಲಾಗುತ್ತದೆ.

ಮತಪತ್ರಗಳು ಆಯತಾಕಾರದ ಕಾಗದದ ತುಂಡುಗಳಾಗಿದ್ದು, ಅದರ ಮೇಲ್ಭಾಗದಲ್ಲಿ ‘ಎಲಿಗೊ ಇನ್ ಸಮ್ಮಮ್ ಪಾಂಟಿಫಿಸೆಮ್‘ (ನಾನು ಸರ್ವೋಚ್ಚ ಧರ್ಮರುವನ್ನು ಆಯ್ಕೆ ಮಾಡುತ್ತೇನೆ) ಎಂದು ಬರೆಯಲಾಗಿರುತ್ತದೆ. ಅದರಲ್ಲಿ ತಮ್ಮ ಆಯ್ಕೆಯ ಹೆಸರು ಬರೆಯಲು ಸ್ಥಳಾವಕಾಶ ಇರುತ್ತದೆ.

ಪ್ರತಿಯೊಬ್ಬ ಕಾರ್ಡಿನಲ್ ತನ್ನ ಆಯ್ಕೆಯ ಹೆಸರನ್ನು ಬರೆದು ಕಾಗದವನ್ನು ಅರ್ಧದಷ್ಟು ಮಡಚಿ, ಪ್ರಾರ್ಥನಾ ಮಂದಿರದ ಮುಂಭಾಗಕ್ಕೆ ನಡೆದುಕೊಂಡು ಬರುತ್ತಾರೆ.

ಕ್ರಿಸ್ತ ಪ್ರಭುವನ್ನು ಸಾಕ್ಷಿಯಾಗಿರಿಸಿಕೊಂಡು, ನನ್ನ ನ್ಯಾಯಾಧೀಶನಾಗಿರುವ ಕ್ರಿಸ್ತನೇ, ಯಾರನ್ನು ಆಯ್ಕೆ ಮಾಡಬೇಕು ಎಂದು ನಾನು ಬಯಸುವೇನೋ, ದೇವರ ಮುಂದೆ ಅವರಿಗೆ ನನ್ನ ಮತವನ್ನು ನೀಡುತ್ತೇನೆ’ ಎಂದು ಘೋಷಿಸಿ ಅದನ್ನು ಟ್ರೇನಲ್ಲಿ ಇರಿಸುತ್ತಾರೆ.

ಪರಿಶೀಲನೆ ನಡೆಸಲು ಗೊತ್ತುಪಡಿಸಿದ ಮೂರು ಕಾರ್ಡಿನಲ್ಗಳು ಪ್ರತಿ ಮತಪತ್ರವನ್ನು ಸರಿಯಾಗಿ ಭರ್ತಿ ಮಾಡಲಾಗಿದೆಯೇ ಎಂದು ಪರಿಶೀಲಿಸುತ್ತಾರೆ. ಎಣಿಕೆ ವೇಳೆ ಪ್ರತಿಯೊಂದು ಹೆಸರನ್ನು ಗಟ್ಟಿಯಾಗಿ ಓದಲಾಗುತ್ತದೆ. ಪ್ರತಿ ಸುತ್ತಿನ ನಂತರ ಫಲಿತಾಂಶಗಳನ್ನು ಘೋಷಿಸಲಾಗುತ್ತದೆ.

ಅಗತ್ಯವಿರುವ ಮೂರನೇ ಎರಡರಷ್ಟು ಮತಗಳನ್ನು ಯಾರೂ ಪಡೆಯದಿದ್ದರೆ, ಮತಪತ್ರಗಳನ್ನು ಸೂಜಿ ಮತ್ತು ದಾರದಿಂದ ಚುಚ್ಚಲಾಗುತ್ತದೆ. ನಂತರ ಅದನ್ನು ಗಂಟು ಹಾಕಿ ಟ್ರೇನಲ್ಲಿ ಇರಿಸಲಾಗುತ್ತದೆ. ಮತ್ತೊಂದು ಸುತ್ತಿನ ಮತದಾನವನ್ನು ಸಿದ್ಧಪಡಿಸಲಾಗುತ್ತದೆ

ಪ್ರತಿ ಮತದಾನದ ನಂತರ, ಮತಪತ್ರಗಳನ್ನು ಸುಡಲಾಗುತ್ತದೆ. ಯಾವುದೇ ಅಭ್ಯರ್ಥಿಯು ಸಾಕಷ್ಟು ಮತಗಳನ್ನು ಪಡೆಯದಿದ್ದರೆ, ಸಿಸ್ಟೀನ್ ಚಾಪೆಲ್ನ ಚಿಮಣಿಯಿಂದ ಕಪ್ಪು ಹೊಗೆ ಮೇಲೇರುತ್ತದೆ. ಪೋಪ್ ಆಯ್ಕೆ ಪೂರ್ಣವಾಗಿಲ್ಲ, ಮತದಾನ ಮುಂದುವರಿಯಲಿದೆ ಎಂದು ಹೊರ ಜಗತ್ತಿಗೆ ಸೂಚನೆ ನೀಡಲು ಈ ಕ್ರಮ ಅನುಸರಿಸಲಾಗುತ್ತದೆ.

ಯಾರಿಗೂ ಪ್ರವೇಶ ಇರದ ಕೋಣೆಯಲ್ಲಿ ಕಾರ್ಡಿನಲ್ಗಳು ಮಲಗುತ್ತಾರೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ, ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಲು ಅವರಿಗೆ ಅವಕಾಶ ಇರುವುದಿಲ್ಲ.

ಮೊಬೈಲ್ ಫೋನ್, ರೇಡಿಯೋ, ದೂರದರ್ಶನ ಮತ್ತು ಪತ್ರಿಕೆಗಳೂ ಅವರಿಗೆನೀಡಲಾಗುವುದಿಲ್ಲ. ಮನೆಗೆಲಸ ಮತ್ತು ಭದ್ರತಾ ಸಿಬ್ಬಂದಿ ಕೂಡ ಗೌಪ್ಯತೆ ಪಾಲಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಹೊಸ ಪೋಪ್ ಆಯ್ಕೆಯಾಗುವವರೆಗೂ ಕಾರ್ಡಿನಲ್ಗಳು ಅಲ್ಲಿಯೇ ಇರಬೇಕು.

(ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.