ಕೀವ್: ಉಕ್ರೇನ್ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿ ರಷ್ಯಾ ಗುರುವಾರ ರಾತ್ರಿ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ.

ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಅಮೆರಿಕದ ಜತೆಗೆ ಮುಂದಿನ ವಾರ ಮಾತುಕತೆ ನಡೆಸುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ ಕೆಲ ಗಂಟೆಗಳಲ್ಲಿಯೇ ರಷ್ಯಾದಿಂದ ಬಾಂಬ್ ದಾಳಿ ನಡೆದಿದೆ.

‘ರಷ್ಯಾ ಭಾರಿ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ’ ಎಂದು ಉಕ್ರೇನ್ ಇಂಧನ ಸಚಿವ ಹರ್ಮನ್ ಹಲುಶ್ಚೆಂಕೊ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಈ ದಾಳಿಯಲ್ಲಿ ಒಂದು ಮಗು ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಉಕ್ರೇನ್ನ ಇಂಧನ, ಅನಿಲ ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸುವ ಮೂಲಕ ರಷ್ಯಾವು, ಉಕ್ರೇನ್ನ ಸಾಮಾನ್ಯ ಜನರನ್ನು ಗುರಿಯಾಗಿಸುತ್ತಿದೆ. ಜನರಿಗೆ ವಿದ್ಯುತ್, ಶಾಖ ದೊರೆಯದಂತೆ ಮಾಡುತ್ತಿದೆ’ ಎಂದು ಹರ್ಮನ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಸೌದಿ ಅರೇಬಿಯಾಗೆ ಸೋಮವಾರ ತೆರಳಿ ಅಲ್ಲಿನ ರಾಜನನ್ನು ಭೇಟಿಯಾಗಲಿದ್ದೇನೆ ಮತ್ತು ಇದೇ ವೇಳೆ ನನ್ನ ತಂಡವು ಅಮೆರಿಕದ ಅಧಿಕಾರಿಗಳ ಜತೆ ಮಾತುಕತೆ ನಡೆಸಲಿದೆ’ ಎಂದು ಝೆಲೆನ್ಸ್ಕಿ ಗುರುವಾರ ರಾತ್ರಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.