ಮಾಸ್ಕೊ: ಉಕ್ರೇನ್‌ನ ಮರಿಯುಪೋಲ್ ನಗರ ಪ್ರದೇಶವನ್ನು ಉಕ್ರೇನ್ ಸೇನಾ ಪಡೆಗಳು ಮತ್ತು ವಿದೇಶಿ ಸೇನಾ ಸಿಬ್ಬಂದಿಯಿಂದ ಸಂಪೂರ್ಣವಾಗಿ ವಶಕ್ಕೆ ಪಡೆದಿರುವುದಾಗಿ ರಷ್ಯಾದ ಮಿಲಿಟರಿ ತಿಳಿಸಿದೆ.

ಅಜೋವ್ಸ್ಟಾಲ್ ಕಬ್ಬಿಣ ಮತ್ತು ಸ್ಟೀಲ್ ವರ್ಕ್ಸ್ ಪ್ಲಾಂಟ್‌ನಲ್ಲಿನ ಉಕ್ರೇನ್ ಸೇನಾಪಡೆಗಳ ವಸ್ತುಗಳನ್ನು ನಿರ್ಬಂಧಿಸಲಾಗಿದೆ. ನಗರದ ಮೇಲೆ ದಾಳಿ ನಡೆಸುವ ವೇಳೆ 1,464 ಉಕ್ರೇನ್ ಯೋಧರು ಶರಣಾಗಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಅವರು ಶನಿವಾರ ಮಾಧ್ಯಮಗಳಿಗೆ ತಿಳಿಸಿದರು.

ರಷ್ಯಾ -ಉಕ್ರೇನ್ ಸಂಘರ್ಷದಲ್ಲಿ ಅಜೋವ್ ಸಮುದ್ರದ ಪ್ರಮುಖ ಬಂದರು ನಗರವಾಗಿರುವ ಮರಿಯುಪೋಲ್ ಅತ್ಯಂತ ಕೆಟ್ಟ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಕ್ಸಿನ್ಹುಹಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಗರವನ್ನು ಮುತ್ತಿಗೆ ಹಾಕಿದ ಸುಮಾರು ಏಳು ವಾರಗಳ ನಂತರವೂ ತನ್ನ ಪಡೆಗಳು ಮಾರಿಯುಪೋಲ್‌ನಲ್ಲಿ ರಷ್ಯಾ ಪಡೆಗಳ ವಿರುದ್ಧ ಹೋರಾಡುತ್ತಿವೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಮರಿಯುಪೋಲ್‌ನಲ್ಲಿ ಉಕ್ರೇನ್ ಸೇನೆಯನ್ನು ನಿರ್ಮೂಲನೆ ಮಾಡುವುದರಿಂದ ರಷ್ಯಾದೊಂದಿಗಿನ ಯಾವುದೇ ಮಾತುಕತೆಯು ಕೊನೆಗೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.

ಏಳು ವಾರಗಳ ಯುದ್ಧದಲ್ಲಿ ಸುಮಾರು 2,500ರಿಂದ 3,000 ಉಕ್ರೇನ್ ಸೈನಿಕರು ಹುತಾತ್ಮರಾಗಿದ್ದಾರೆ. ಸುಮಾರು 10 ಸಾವಿರ ಯೋಧರು ಗಾಯಗೊಂಡಿದ್ದಾರೆ. ಹಾಗೆಯೇ ನಮ್ಮ ಸೇನೆ, ರಷ್ಯಾದ ಸುಮಾರು 20 ಸಾವಿರ ಆಕ್ರಮಣಕಾರರನ್ನು ಕೊಂದಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.