ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್‌ ಟೀಕೆ ನಂತರ ಹೃದಯಾಘಾತಕ್ಕೀಡಾದ ರಷ್ಯಾ ರಕ್ಷಣಾ ಸಚಿವ: ಉಕ್ರೇನ್‌ ವಾದ

Last Updated 26 ಮಾರ್ಚ್ 2022, 11:23 IST
ಅಕ್ಷರ ಗಾತ್ರ

ಕೀವ್‌: ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರು ಹೃದಯಾಘಾತಕ್ಕೀಡಾಗಿದ್ದಾರೆ. ಹೀಗಾಗಿಯೇ ಅವರುಎರಡು ವಾರಗಳಿಂದಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಉಕ್ರೇನ್‌ ಶನಿವಾರ ಪ್ರತಿಪಾದಿಸಿದೆ.

ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವಾಲಯದ ಸಲಹೆಗಾರ, ಮಾಜಿ ಉಪ ಮಂತ್ರಿ ಆಂಟನ್ ಗೆರಾಶ್ಚೆಂಕೊಈ ಬಗ್ಗೆಶನಿವಾರಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ಪ್ರಕಟಿಸಿದ್ದಾರೆ.

'ಉಕ್ರೇನ್ ವಿರುದ್ಧದ ಆಕ್ರಮಣದ ವೈಫಲ್ಯಗಳಿಗಾಗಿರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ಟೀಕೆಗೆ ಗುರಿಯಾದನಂತರ ಶೋಯಿಗು ಹೃದಯಾಘಾತಕ್ಕೀಡಾಗಿದ್ದಾರೆ' ಎಂದು ಗೆರಾಶ್ಚೆಂಕೊಬರೆದುಕೊಂಡಿದ್ದಾರೆ.

ಸಚಿವ ಶೋಯಿಗು ಪ್ರಸ್ತುತ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ ಎಂದೂ ಉಕ್ರೇನ್ ಅಧಿಕಾರಿ ಹೇಳಿದ್ದಾರೆ.

ಈ ಮಧ್ಯೆ ರಷ್ಯಾ ತನ್ನರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರಿಗೆ ಸಂಬಂಧಿಸಿದ ವಿಡಿಯೊವೊಂದನ್ನು ಶನಿವಾರ ಬಿಡುಗಡೆ ಮಾಡಿದೆ. ಶೋಯಿಗು ಅವರು ಸೇನಾ ಸಭೆಯ ಅಧ್ಯಕ್ಷತೆ ವಹಿಸಿ, ಶಸ್ತ್ರಾಸ್ತ್ರ ಪೂರೈಕೆಯ ಕುರಿತು ಚರ್ಚಿಸುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ.ಈ ಎರಡು ವಾರಗಳಲ್ಲಿ ಶೋಯಿಗು ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT