ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್‌ರದ್ದು ‘ಹುಚ್ಚುತನ ಮತ್ತು ಅಪರಾಧ’ದಿಂದ ಕೂಡಿದ ಯುದ್ಧ: ರಚಿನ್‌ಸ್ಕಿ

Last Updated 10 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಒಸ್ಲೊ, ನಾರ್ವೆ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಉಕ್ರೇನ್‌ ಮೇಲೆ ನಡೆಸಿದ ಯುದ್ಧವನ್ನು ‘ಹುಚ್ಚುತನ ಮತ್ತು ಅಪರಾಧ’ದಿಂದ ಕೂಡಿದ ಕೃತ್ಯ ಎಂದು ನೊಬೆಲ್‌ ಶಾಂತಿ ಪ್ರಶಸ್ತಿಗೆ ಭಾಜನರಾದ ರಷ್ಯಾ ಪ್ರಜೆ ಯಾನ್‌ ರಚಿನ್‌ಸ್ಕಿ ಅವರು ಕರೆದಿದ್ದಾರೆ.

ಇಲ್ಲಿ ನಡೆದ ಸಮಾರಂಭದಲ್ಲಿ ನೊಬೆಲ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಪುಟಿನ್‌ ಆಡಳಿತದಲ್ಲಿ ರಷ್ಯಾಕ್ಕೆ ಪ್ರತಿರೋಧ ತೋರುವುದನ್ನು ‘ದಬ್ಬಾಳಿಕೆ’ ಎಂದು ಕರೆಯಲಾಗುವುದು ಮತ್ತು ಉಕ್ರೇನ್‌ ಮೇಲೆ ನಡೆಸಿರುವ ಹುಚ್ಚುತನದಿಂದ ಕೂಡಿದ ಆಕ್ರಮಣಕ್ಕೆ ಸೈದ್ಧಾಂತಿಕ ಸಮರ್ಥನೆಯನ್ನಾಗಿಯೂ ಆ ಪದವನ್ನು ಬಳಸಲಾಗುವುದು ಎಂದರು.

ಯಾನ್‌ ರಚಿನ್‌ಸ್ಕಿ ಅವರು ಮೆಮೊರಿಯಲ್‌ ಎಂಬ ಸಂಸ್ಥೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT