ದುಬೈ: ಸೌದಿ ಅರೇಬಿಯಾದ ಗ್ರ್ಯಾಂಡ್ ಮುಫ್ತಿ ಶೇಖ್ ಅಬ್ದುಲಝೀಝ್ ಬಿನ್ ಅಬ್ದುಲ್ಲಾ ಅಲ್ ಶೇಖ್ (80) ಅವರು ಮಂಗಳವಾರ ನಿಧನ ಹೊಂದಿದ್ದಾರೆ.

ಸೌದಿ ಅರೇಬಿಯಾದ ಅಗ್ರ ಧಾರ್ಮಿಕ ವ್ಯಕ್ತಿಯಾಗಿ ಕಾಲು ಶತಮಾನಕ್ಕೂ ಹೆಚ್ಚು ಕಾಲ ಅವರು ಕಾರ್ಯನಿರ್ವಹಿಸಿದ್ದರು. ಶೇಖ್ ಅಬ್ದುಲಝೀಝ್ ಅವರ ನಿಧನದ ಸುದ್ದಿಯನ್ನು ಪ್ರಕಟಿಸಿರುವ ದೇಶದ ಸರ್ಕಾರಿ ಸ್ವಾಮ್ಯದ ಮಾಧ್ಯಮವು, ನಿಧನಕ್ಕೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ.

‘ಇಸ್ಲಾಂ ಮತ್ತು ಮುಸ್ಲಿಮರ ಸೇವೆಗೆ ಮಹತ್ವದ ಕೊಡುಗೆ ನೀಡಿದ ಒಬ್ಬ ವಿಶಿಷ್ಟ ವಿದ್ವಾಂಸನನ್ನು ದೇಶ ಮತ್ತು ಮುಸ್ಲಿಂ ಜಗತ್ತು ಕಳೆದುಕೊಂಡಿದೆ’ ಎಂದು ಸೌದಿ ರಾಜ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.

ಕಟ್ಟಾ ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರವಾದ ಸೌದಿ ಅರೇಬಿಯಾವನ್ನು ಸಾಮಾಜಿಕವಾಗಿ ಉದಾರೀಕರಣಗೊಳಿಸಿದ್ದರು. ಅವರು ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್–ಖೈದಾದಂತಹ ಉಗ್ರಗಾಮಿಗಳನ್ನು ಖಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.