ವಾಷಿಂಗ್ಟನ್; ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಿದರೆ ಗಂಭೀರ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತ, ಬ್ರೆಜಿಲ್ ಮತ್ತು ಚೀನಾ ರಾಷ್ಟ್ರಗಳಿಗೆ ನ್ಯಾಟೊ ಸೆಕ್ರೆಟರಿ ಜನರಲ್ ಮಾರ್ಕ್ ರುಟ್ಟೆ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಸೆನೆಟರ್ಗಳ ಜೊತೆ ಮಾತುಕತೆ ಬಳಿಕ ವರದಿಗಾರರ ಜೊತೆ ಮಾತನಾಡಿದ ಅವರು, ಶಾಂತಿ ಮಾತುಕತೆಗೆ ಮುಂದಾಗುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಒತ್ತಾಯಿಸುವಂತೆ ಭಾರತ, ಚೀನಾ ಮತ್ತು ಬ್ರೆಜಿಲ್ಗೆ ಸೂಚಿಸಿದ್ದಾರೆ.

‘ಚೀನಾ ಅಧ್ಯಕ್ಷರೇ, ಭಾರತದ ಪ್ರಧಾನಿಗಳೇ ಮತ್ತು ಬ್ರೆಜಿಲ್ನ ಅಧ್ಯಕ್ಷರೇ.. ನೀವು ರಷ್ಯಾ ಜೊತೆ ತೈಲ ಮತ್ತು ಅನಿಲ ಖರೀದಿ ವ್ಯವಹಾರ ಮುಂದುವರಿಸಿದರೆ. ರಷ್ಯಾ, ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ ಸಿದ್ಧವಾಗದೇ ಇದ್ದರೆ ನಾನು ಶೇ100ರಷ್ಟು ದ್ವಿತೀಯ ನಿರ್ಬಂಧ ಹೇರುತ್ತೇನೆ’ಎಂದು ಹೇಳಿದ್ದಾರೆ.

ಈ ಮೂರೂ ದೇಶಗಳಿಗೆ ನಾನು ಹೇಳುವುದೇನೆಂದರೆ, ಈ ದಿನ ರಾತ್ರಿ ನಿಮ್ಮ ದೇಶಗಳ ಮೇಲೆ ದೊಡ್ಡ ನಿರ್ಬಂಧ ಬೀಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೂಡಲೇ ಪುಟಿನ್ಗೆ ಕರೆ ಮಾಡಿ ಶಾಂತಿ ಮಾತುಕತೆಗೆ ಸಿದ್ಧವಾಗಲು ಸೂಚಿಸಿ ಎಂದು ಮೂರೂ ದೇಶಗಳಿಗೆ ನ್ಯಾಟೊ ಮುಖ್ಯಸ್ಥರು ಒತ್ತಾಯಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್ಗೆ ಹೊಸ ಮಿಲಿಟರಿ ಬೆಂಬಲ ಹಾಗೂ ರಷ್ಯಾ ಮತ್ತು ಅದರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ವ್ಯಾಪಕ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ ಒಂದು ದಿನದ ನಂತರ ನ್ಯಾಟೊ ನಾಯಕರ ಹೇಳಿಕೆ ಹೊರಬಿದ್ದಿದೆ.

50 ದಿನಗಳಲ್ಲಿ ರಷ್ಯಾ, ಉಕ್ರೇನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ ರಷ್ಯಾದ ರಫ್ತುಗಳ ಮೇಲೆ ಶೇ 100 ರಷ್ಟು ಸುಂಕ ಮತ್ತು ರಷ್ಯಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುವುದಾಗಿ ಟ್ರಂಪ್ ಈ ಹಿಂದೆ ಘೋಷಿಸಿದ್ದರು.

'50 ದಿನಗಳ ಕೊನೆಯಲ್ಲಿ ನಾವು ಒಪ್ಪಂದ ಮಾಡಿಕೊಳ್ಳದಿದ್ದರೆ, ಅದು ತುಂಬಾ ಕೆಟ್ಟದಾಗಿರುತ್ತದೆ. ಸುಂಕಗಳು ಮುಂದುವರಿಯಲಿವೆ ಮತ್ತು ಇತರ ನಿರ್ಬಂಧಗಳು ಮುಂದುವರಿಯಲಿವೆ' ಎಂದು ಟ್ರಂಪ್ ಹೇಳಿದ್ದರು.

ಅಮೆರಿಕ ಕಾಂಗ್ರೆಸ್ನಿಂದ ಹೊಸ ಅನುಮೋದನೆಯ ಅಗತ್ಯವಿಲ್ಲದೆ ದ್ವಿತೀಯ ಸುಂಕಗಳನ್ನು ಜಾರಿಗೊಳಿಸಬಹುದು ಎಂದು ಅವರು ಗುಡುಗಿದ್ದರು.

ವರದಿಗಳ ಪ್ರಕಾರ, ಭಾರತ ಮತ್ತು ಚೀನಾ ದೇಶಗಳು ರಷ್ಯಾದಿಂದ ಶೇ 70ಕ್ಕೂ ಅಧಿಕ ತೈಲ ಖರೀದಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.