ಸಿಂಗಪುರ: ಸಿಂಗಪುರದ ಚಂಗಯ್ ವಿಮಾನ ನಿಲ್ದಾಣದ ಮಳಿಗೆಗಳಲ್ಲಿ ₹ 1.15 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ ಆರೋಪದಲ್ಲಿ ಭಾರತದ ನಾಗರಿಕನನ್ನು ಬಂಧಿಸಲಾಗಿದೆ.

37 ವರ್ಷದ ಸಿಂಗ್ ಸಾಗರ್ ಆರೋಪಿ.
.ಇಳಕಲ್ | 45 ಹಂದಿ ಕಳ್ಳತನ: ಮೂವರ ಬಂಧನ.
ವಿಮಾನ ನಿಲ್ದಾಣದ ಟರ್ಮಿನಲ್–3 ರ ಪ್ರಯಾಣ ಮಾರ್ಗದಲ್ಲಿದ್ದ ಮಳಿಗೆಗಳಿಂದ ಮಾರ್ಚ್ 23ರಂದು ಲೇಖನ ಸಾಮಗ್ರಿಗಳು, ಚಾಕಲೇಟ್ ಮತ್ತು ಆಭರಣಗಳನ್ನು ಕಳವು ಮಾಡಿದ್ದ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆತನ ಮೇಲೆ ಕಳ್ಳತನದ ಐದು ಆರೋಪಗಳನ್ನು ಹೊರಿಸಲಾಗಿದೆ.

ಡಬ್ಲ್ಯೂ.ಎಚ್ ಸ್ಮಿತ್ ಬುಕ್ ಸ್ಟೋರ್ಮಿಂದ ಸುಮಾರು ಲೇಖನ ಸಾಮಗ್ರಿಗಳು ಹಾಗೂ ಪವರ್ ಬ್ಯಾಂಕ್ ಸೇರಿ ಒಟ್ಟು ₹35,032 ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾನೆ.
.ಮಾಲೀಕನ ಮನೆಯಲ್ಲಿಯೇ ಕಳ್ಳತನ: ಮಧ್ಯಪ್ರದೇಶದಲ್ಲಿ ಆರೋಪಿ ಸೆರೆ.
ಬಳಿಕ ಕೊಕಾ ಟ್ರೀಸ್ ಎನ್ನುವ ಕ್ಯಾಂಡಿ ಮಳಿಗೆಯಿಂದ, ಡಿಸ್ಕವರ್ ಸಿಂಗಪುರ ಎನ್ನುವ ಸುವನೀರ್ ಮಳಿಗೆಯಿಂದ, ಕಬೂಮ್ ಎನ್ನುವ ಆಟಿಕೆ ಮಳಿಗೆಯಿಂದ, ವಿಕ್ಟೋರಿಯಾಸ್ ಸೀಕ್ರೆಟ್ ಒಳ ಉಡುಪು ಅಂಗಡಿಯಿಂದ ಚಾಕಲೇಟ್ ಪೊಟ್ಟಣಗಳನ್ನು, ಆಭರಣ, ಟೀ ಶರ್ಟ್, ವಾಚ್ ಹಾಗೂ ಹ್ಯಾಂಡ್ ಬ್ಯಾಗ್ಗಳನ್ನು ಕಳವುಗೈದಿದ್ದ.

ಘಟನೆ ನಡೆದ ಕೂಡಲೇ ಸಿಂಗ್ನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಸಿಂಗಪುರ ಬಿಡದಂತೆ ಆತನನ್ನು ತಡೆದಿದ್ದಾರೆ.
.ಕೇಬಲ್ ಕಳ್ಳತನ: ಕಳ್ಳರನ್ನು ಹಿಡಿದ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.