ಇಳಕಲ್: ಸಮೀಪದ ಗೊರಬಾಳ ಗ್ರಾಮ ವ್ಯಾಪ್ತಿಯಲ್ಲಿ ಹಂದಿ ಸಾಕಾಣಿಕಾ ಫಾರ್ಮ್ನಿಂದ ಫೆ.12 ರಂದು ₹ 13.5.ಲಕ್ಷ ಮೌಲ್ಯದ 45 ಹಂದಿಗಳ ಕಳ್ಳತನ ನಡೆದಿತ್ತು.

ಈ ಪ್ರಕರಣದ ತನಿಖೆ ಮಾಡಿದ ಪೊಲೀಸರು ಮೂವರನ್ನು ಬಂಧಿಸಿ, ₹ 4.59 ಲಕ್ಷ ನಗದು, ಕಳ್ಳತನಕ್ಕೆ ಬಳಸಲಾಗಿದ್ದ ಬೊಲೆರೋ ಗೂಡ್ಸ್ ವಾಹನ ವಶಕ್ಕೆ ಪಡೆದಿದ್ದಾರೆ.

ಬಾಗಲಕೋಟೆ ಎಸ್.ಪಿ ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್.ಪಿ ಪ್ರಸನ್ನ ದೇಸಾಯಿ ಮತ್ತು ಮಹಾಂತೇಶ ಜಿದ್ದಿ, ಹುನಗುಂದ ಡಿ.ವೈ.ಎಸ್.ಪಿ ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಹುನಗುಂದ ಸಿ.ಪಿ.ಐ. ಸುನೀಲ್ ಸವದಿ ನೇತೃತ್ವದಲ್ಲಿ ಕಳ್ಳರ ಪತ್ತೆಗೆ ತಂಡ ರಚಿಸಲಾಗಿತ್ತು.

ಇಳಕಲ್ ನಗರ ಠಾಣೆಯ ಪಿಎಸ್ಐ ಶಹಜಾನ್ ನಾಯಕ್, ಗ್ರಾಮೀಣ ಪಿಎಸ್ಐ ಮಲ್ಲಿಕಾರ್ಜುನ ಸತ್ತಿಗೌಡರ್, ಅಪರಾಧ ವಿಭಾಗದ ಪಿ.ಎಸ್.ಐ. ಸಿ.ಬಿ.ಕಿರಶ್ಯಾಳ, ಇಳಕಲ್ ಗ್ರಾಮೀಣ ಠಾಣಾ ಸಿಬ್ಬಂದಿ ಎ.ಎಂ. ಗೋಲಪ್ಪನವರ್, ಗಣೇಶ ಪವಾರ್, ಬುಡ್ಡಾ ವಾಲಿಕಾರ, ಹುನಗುಂದ ವೃತ್ತ ಕಚೇರಿ ಮತ್ತು ಇಳಕಲ್ ಶಹರ ಠಾಣೆಯ ಸಿಬ್ಬಂದಿ ಎ.ಎಚ್. ಸುತಗುಂಡಾರ, ರಜಾಕ್ ಗುಡಾರಿ, ಚನ್ನಪ್ಪ ಬಳಿಗಾರ, ಬಸವರಾಜ ಕಟಗಿ, ಸಿ.ಬಿ.ಜವಳಗೇರಿ, ಚಂದ್ರು ಜಟ್ಟೆಪ್ಪಗೋಳ, ಅವರೇಶ ಗ್ಯಾರಡ್ಡಿ, ನಾಗರಾಜ ಕುಂದರಗಿ ಅವರ ಏಪ್ರಿಲ್ 4 ರಂದು ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.