ಮಾಸ್ಕೋ: ಒಂದು ಡೋಸ್ ಹಾಕಿಸಿಕೊಳ್ಳುವ ಸ್ಪುಟಿಕ್ ಲೈಟ್ ಕೋವಿಡ್ ಲಸಿಕೆಯ ಬಳಕೆಗೆ ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (ಆರ್ಡಿಐಎಫ್) ಗುರುವಾರ ಅನುಮೋದನೆ ನೀಡಿದೆ.

ಇದು ಅತಿ ಹೆಚ್ಚು ಕೋವಿಡ್ ಸೋಂಕು ಹೊಂದಿರುವ ರಾಷ್ಟ್ರಗಳಿಗೆ ಆದಷ್ಟು ಬೇಗನೇ ಲಸಿಕೆ ಸರಬರಾಜು ಮಾಡಲು ನೆರವಾಗಲಿದೆ.

ಮಾಸ್ಕೋದ ಗಮಲೆಯಾ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ಲೈಟ್ ಕೋವಿಡ್ ಲಸಿಕೆಯು ಶೇಕಡಾ 79.4ರಷ್ಟು ಪರಿಣಾಮಕಾರಿಯಾಗಲಿದೆ ಎಂದು ಹೇಳಿದೆ.

ಒಂದು ಡೋಸ್ ಸ್ಪುಟಿಕ್ ಲೈಟ್ ಲಸಿಕೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ರಷ್ಯಾದಲ್ಲಿ ಕೋವಿಡ್ ಲಸಿಕೆ ಅಭಿಯಾನದ ಭಾಗವಾಗಿ, 2020 ಡಿಸೆಂಬರ್ ಹಾಗೂ 2021ರ ಏಪ್ರಿಲ್ ನಡುವೆ ಸ್ಪುಟಿಕ್ ಲೈಟ್ ಲಸಿಕೆಯ ಒಂದು ಡೋಸ್ ಹಾಕಿಸಿಕೊಂಡ 28 ದಿನಗಳ ಬಳಿಕ ನಡೆಸಿದ ಅಧ್ಯಯನದಲ್ಲಿ ಶೇಕಡಾ 79.4ರಷ್ಟು ಪರಿಣಾಮಕಾರಿ ಎಂಬುದು ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.