ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಮಾಂಸ ನಿಷೇಧ ಮಸೂದೆ ಅಂಗೀಕರಿಸಿದ ದಕ್ಷಿಣ ಕೊರಿಯಾ

Published 9 ಜನವರಿ 2024, 10:21 IST
Last Updated 9 ಜನವರಿ 2024, 10:21 IST
ಅಕ್ಷರ ಗಾತ್ರ

ಸಿಯೋಲ್‌: ನಾಯಿ ಮಾಂಸ ಸೇವನೆ ನಿಷೇಧಿಸುವ ಮಸೂದೆಯೊಂದನ್ನು ದಕ್ಷಿಣ ಕೊರಿಯಾ ಸರ್ಕಾರ ಅಂಗೀಕರಿಸಿದ್ದು, ಆ ಮೂಲಕ ಪ್ರಾಚೀನ ಆಹಾರ ಪದ್ಧತಿಯನ್ನು ಕೈಬಿಡಲು ಮುಂದಾಗಿದೆ.

ನಾಯಿ ಮಾಂಸ ನಿಷೇಧಿಸುವ ಕುರಿತ ಮಸೂದೆಯನ್ನು ಇಂದು ನಡೆದ ಸಂಸತ್‌ ಸಭೆಯಲ್ಲಿ ಮಂಡಿಸಿದ್ದು, 208-0 ಮತಗಳಿಂದ ಮಸೂದೆಯನ್ನು ಅಂಗೀಕರಿಸಲಾಗಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಸಹಿ ಮಾಡಿದ ನಂತರ ಈ ಮಸೂದೆ ಕಾನೂನು ಆಗಿ ಜಾರಿಯಾಗಲಿದೆ.

ಮನುಷ್ಯರ ಆಹಾರವಾಗಿ ನಾಯಿ ಸಾಕಾಣಿಕೆ, ವಧೆ, ಮಾರಾಟ ಸಂಪೂರ್ಣ ಕಾನೂನುಬಾಹಿರ ಹಾಗೂ ಕೃತ್ಯ ಎಸಗಿದವರಿಗೆ 2 ರಿಂದ 3 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ ಮಸೂದೆಯಲ್ಲಿದೆ. ಇದು 2027ರಿಂದ ಜಾರಿಗೆ ಬರಲಿದೆ.

ನಾಯಿ ಮಾಂಸ ನಿಷೇಧಿಸುವ ಸರ್ಕಾರದ ನಿರ್ಧಾರಕ್ಕೆ ರೈತರು ಮತ್ತು ನಾಯಿ ಮಾಂಸ ವ್ಯಾಪಾರಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಈ ಕುರಿತು ಇತ್ತೀಚೆಗೆ ಸಮೀಕ್ಷೆಯೊಂದನ್ನು ಕೈಗೊಂಡಿದ್ದು, ದೇಶದ ಯುವ ಸಮುದಾಯ ಸೇರಿದಂತೆ ಹಲವರು ಪ್ರಾಣಿ ಕ್ರೌರ್ಯದ ಬಗ್ಗೆ ಕಾಳಜಿ ಹೊಂದಿರುವುದು ತಿಳಿದುಬಂದಿದೆ. ಅಲ್ಲದೇ ನಾಯಿ ಮಾಂಸ ಸೇವನೆ ಕುರಿತಂತೆ ಜಾಗತಿಕ ಮಟ್ಟದಲ್ಲೂ ವಿರೋಧ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT