ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ‍್ಯಾಲೆಸ್ಟೀನ್‌ಗೆ ಇಯು ಸದಸ್ಯತ್ವ; ಸ್ಪೇನ್‌, ನಾರ್ವೆ ಬೆಂಬಲ

Published 28 ಮೇ 2024, 13:51 IST
Last Updated 28 ಮೇ 2024, 13:51 IST
ಅಕ್ಷರ ಗಾತ್ರ

ಬಾರ್ಸೆಲೊನಾ: ಯೂರೋಪಿಯನ್ ಯೂನಿಯನ್ (ಇಯು) ಸದಸ್ಯ ರಾಷ್ಟ್ರವಾಗಿ ಪ್ಯಾಲೆಸ್ಟೀನ್‌ಗೆ ಮಾನ್ಯತೆ ನೀಡಲು ಸ್ಪೇನ್‌ ಮತ್ತು ನಾರ್ವೆ ದೇಶಗಳು ಅನುಮೋದಿಸಿವೆ.

ಈ ರಾಜತಾಂತ್ರಿಕ ನಡೆಯನ್ನು ಇಸ್ರೇಲ್‌ ಖಂಡಿಸಿದೆ. ಸದ್ಯ, ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಮೇಲೆ ಈ ಬೆಳವಣಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ.

ಸ್ಪೇನ್‌ನ ಪ್ರಧಾನ ಮಂತ್ರಿ ಪೆದ್ರೊ ಸ್ಯಾಂಚೆಜ್ ಅವರು, ‘ಮಂಗಳವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ನಿಲುವು ಕೈಗೊಳ್ಳಲಾಗಿದೆ. ಇಸ್ರೇಲಿಯನ್ನರು, ಪ್ಯಾಲೆಸ್ಟೀನಿಯರ ನಡುವೆ ಶಾಂತಿ ಸ್ಥಾಪನೆಗೆ ನೆರವಾಗುವ ಉದ್ದೇಶವನ್ನು ಇದು ಹೊಂದಿದೆ ಎಂದು ಹೇಳಿದ್ದಾರೆ.

ಇಸ್ರೇಲ್‌ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್‌ ಅವರು, ‘ಸ್ಪೇನ್‌ ಸರ್ಕಾರವು ಈ ಮೂಲಕ ಸಂಕೀರ್ಣ ನಿಲುವು ಪ್ರದರ್ಶಿಸಿದ್ದು, ಜ್ಯೂಯಿಶ್‌ಗಳ ವಿರುದ್ಧದ ನರಮೇಧ ಹಾಗೂ ಯುದ್ಧ ಅಪರಾಧಗಳಿಗೆ ಬೆಂಬಲ ನೀಡುತ್ತಿದೆ ಎಂದು ಟೀಕಿಸಿದ್ದಾರೆ. 

ನಾರ್ವೆಯ ವಿದೇಶಾಂಗ ಸಚಿವ ಎಸ್ಪೆನ್ ಬಾರ್ತ್‌ ಐಡೆ ಅವರು, ‘ಕಳೆದ 30 ವರ್ಷಗಳಿಂದ ಪ್ಯಾಲೆಸ್ಟೀನ್‌ ರಾಷ್ಟ್ರವನ್ನು ನಾರ್ವೆ ಬೆಂಬಲಿಸುತ್ತಿದ್ದು, ಇಯು ಸದಸ್ಯತ್ವ ಪ್ರಸ್ತಾಪವನ್ನು ಬೆಂಬಲಿಸಲಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT