ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾ: ಭಾರತದ ನಾಲ್ವರು ಮೀನುಗಾರರ ಬಂಧನ

Published 18 ಜೂನ್ 2024, 12:35 IST
Last Updated 18 ಜೂನ್ 2024, 12:35 IST
ಅಕ್ಷರ ಗಾತ್ರ

ಕೊಲಂಬೊ: ಭಾರತದ ನಾಲ್ವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯವರು ಮಂಗಳವಾರ ಬಂಧಿಸಿದ್ದಾರೆ. 

ಶ್ರೀಲಂಕಾ ವ್ಯಾಪ್ತಿಯ ಕಡಲಿನ ಪ್ರದೇಶಕ್ಕೆ ಮೀನುಗಾರರು ನುಸುಳಿದ್ದರು ಎಂದು ನೌಕಾಪಡೆಯವರು ಆರೋಪಿಸಿದ್ದಾರೆ. 

‘ಜಾಫ್ನಾ ಪೆನಿನ್‌ಸುಲಾದಲ್ಲಿನ ಡೆಲ್ಫ್ಟ್‌ ದ್ವೀಪದ ಉತ್ತರ ಭಾಗದಲ್ಲಿ ಮೀನುಗಾರರನ್ನು ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ. ಅವರು ಸಾಗಿಬಂದಿದ್ದ ಒಂದು ಮೀನುಗಾರಿಕಾ ದೋಣಿಯನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ಶ್ರೀಲಂಕಾ ನೌಕಾಪಡೆಯವರು ತಿಳಿಸಿದ್ದಾರೆ.

ಶ್ರೀಲಂಕಾ ವ್ಯಾಪ್ತಿಯ ಕಡಲಿಗೆ ನುಸುಳಿಬಂದ ಕಾರಣಕ್ಕೆ ಈ ವರ್ಷ ಇದುವರೆಗೆ 182 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, 25 ದೋಣಿಗಳನ್ನು ವಶಪಡಿಸಿಕೊಂಡಂತೆ ಆಗಿದೆ ಎಂದು ಹೇಳಿದ್ದಾರೆ. 

ಪಾಕ್‌ ಜಲಸಂಧಿ ವ್ಯಾಪ್ತಿಯಲ್ಲಿಯೇ ಬಹುತೇಕ ಮೀನುಗಾರರು ಶ್ರೀಲಂಕಾ ವ್ಯಾಪ್ತಿಯ ಕಡಲಿನ ಭಾಗಕ್ಕೆ ಸಾಗುತ್ತಾರೆ. ಕಳೆದ ವರ್ಷ ಭಾರತದ 240–245 ಮೀನುಗಾರರನ್ನು ಶ್ರೀಲಂಕಾ ಬಂಧಿಸಿತ್ತು. 

ಜೂನ್ 20ರಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಶ್ರೀಲಂಕಾಗೆ ಭೇಟಿ ನೀಡಲಿದ್ದು, ಆಗ ಮೀನುಗಾರರ ನುಸುಳುವಿಕೆಯ ಕುರಿತು ಚರ್ಚೆ ನಡೆಸಲಾಗುವುದು ಎಂದು ಶ್ರೀಲಂಕಾದ ಮೀನುಗಾರಿಕಾ ಇಲಾಖೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT