ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸಿರಿಯಾ: ಮಧ್ಯಂತರ ಸರ್ಕಾರ ರಚನೆಗೆ ಕಸರತ್ತು ಆರಂಭ

ಪ್ರಧಾನಿ, ಉಪಾಧ್ಯಕ್ಷರನ್ನು ಭೇಟಿಯಾದ ಹೋರಾಟಗಾರರ ಕಮಾಂಡರ್‌ ಗೊಲೋನಿ
Published : 9 ಡಿಸೆಂಬರ್ 2024, 16:29 IST
Last Updated : 9 ಡಿಸೆಂಬರ್ 2024, 16:29 IST
ಫಾಲೋ ಮಾಡಿ
Comments
ಯುದ್ಧಾಪರಾಧಗಳಿಗಾಗಿ ಸಿರಿಯಾದ ಮಾಜಿ ಅಧ್ಯಕ್ಷ ಬಶರ್‌ ಅಸಾದ್‌ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ನ್ಯಾಯಾಲಯದ ಕಟಕಟೆಗೆ ತರಬೇಕು.
– ವೋಲ್ಕರ್‌ ಟರ್ಕ್‌ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ 
ಇರಾಕ್‌ ಪ್ರವೇಶಿಸಿದ ಸಿರಿಯಾದ 4000 ಸೈನಿಕರು
ಹೋರಾಟಗಾರರು ಡೆಮಾಸ್ಕಸ್‌ ಅನ್ನು ವಶಕ್ಕೆ ಪಡೆದ ಬಳಿಕ ಸಿರಿಯಾದ 4000ಕ್ಕೂ ಹೆಚ್ಚು ಸೈನಿಕರು ಗಡಿ ದಾಟಿ ಇರಾಕ್‌ ಪ್ರವೇಶಿಸಿದ್ದಾರೆ ಎಂದು ಇರಾಕ್‌ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಶಸ್ತ್ರಾಸ್ತ್ರಗಳು ಮದ್ದುಗುಂಡುಗಳು ಮತ್ತು ಶಸ್ತ್ರಸಜ್ಜಿತ ವಾಹನಗಳೊಂದಿಗೆ ಸಿರಿಯಾದ ಸೈನಿಕರು ಇರಾಕ್‌ ಪ್ರವೇಶಿಸಿದ್ದಾರೆ. ಅವರನ್ನು ಶಿಬಿರದಲ್ಲಿ ಇರಿಸಲಾಗುವುದು ಎಂದು ಇರಾಕ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಆ ಶಿಬಿರ ಎಲ್ಲಿರುತ್ತದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.
ಸಿರಿಯಾ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ
ಸಿರಿಯಾದಲ್ಲಿನ ಶಂಕಿತ ರಾಸಾಯನಿಕ ಶಸ್ತ್ರಾಸ್ತ್ರ ತಾಣಗಳು ಮತ್ತು ದೀರ್ಘ ಶ್ರೇಣಿಯ ಕ್ಷಿಪಣಿ ರಾಕೆಟ್‌ಗಳಿರುವ ತಾಣಗಳ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ. ಈ ಶಸ್ತ್ರಾಸ್ತ್ರಗಳು ಹೋರಾಟಗಾರರ ಕೈ ಸೇರಬಾರದು ಎಂಬ ಉದ್ದೇಶದಿಂದ ದಾಳಿ ನಡೆಸಿದ್ದಾಗಿ ಇಸ್ರೇಲ್‌ನ ವಿದೇಶಾಂಗ ಸಚಿವ ಸೋಮವಾರ ತಿಳಿಸಿದ್ದಾರೆ. ಇರಾನ್‌ ಮತ್ತು ಲೆಬೆನಾನ್‌ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪಿನ ಪ್ರಮುಖ ಮಿತ್ರನಾಗಿದ್ದ ಅಸಾದ್‌ ಸರ್ಕಾರದ ಪತನವನ್ನು ಇಸ್ರೇಲಿಗಳು ಸ್ವಾಗತಿಸಿದ್ದಾರೆ. ಆದರೆ ಮುಂದೆ ಏನಾಗಬಹುದೋ ಎಂಬ ಕಳವಳ ಅವರನ್ನು ಆವರಿಸಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ತನ್ನ ಪಡೆಗಳು ಸಿರಿಯಾದೊಳಗಿನ ಬಫರ್‌ ವಲಯವನ್ನು ವಶಪಡಿಸಿಕೊಂಡಿವೆ ಎಂದು ಇಸ್ರೇಲ್‌ ಹೇಳಿದೆ.  ‘ಇಸ್ರೇಲ್‌ ಮತ್ತು ಅದರ ನಾಗರಿಕರ ಭದ್ರತೆ ನಮ್ಮ ಏಕೈಕ ಆಸಕ್ತಿಯಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದ ಇಸ್ರೇಲ್‌ ವಿದೇಶಾಂಗ ವ್ಯವಹಾರಗಳ ಸಚಿವ ಗಿಡಿಯಾನ್‌ ಸಾರ್ ‘ಅದಕ್ಕಾಗಿಯೇ ಸಿರಿಯಾದಲ್ಲಿ ಉಳಿದಿರುವ ರಾಸಾಯನಿಕ ಶಸ್ತ್ರಾಸ್ತ್ರಗಳು ಅಥವಾ ದೀರ್ಘ ಶ್ರೇಣಿಯ ಕ್ಷಿಪಣಿಗಳು ಮತ್ತು ರಾಕೆಟ್‌ಗಳಂತಹ ಶಸ್ತ್ರಾಸ್ತ್ರಗಳಿರುವ ತಾಣಗಳ ಮೇಲೆ ದಾಳಿ ಮಾಡಿದ್ದೇವೆ. ಈ ಶಸ್ತ್ರಾಸ್ತ್ರಗಳು ಹೋರಾಟಗಾರರ ಕೈಗೆ ಸಿಗಬಾರದು ಎಂಬುದು ನಮ್ಮ ಆಶಯವಾಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT