ಕಾಬೂಲ್: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ತನ್ನ ಸರ್ಕಾರವನ್ನು ಘೋಷಿಸಿಕೊಂಡಿದ್ದೂ ಅಲ್ಲದೇ, ವಿವಿಧ ಇಲಾಖೆಗಳಿಗೆ ಮಂತ್ರಿಗಳನ್ನೂ ನೇಮಕ ಮಾಡಿಕೊಂಡಿದೆ. ಈಗ ಒಂದೊಂದೇ ಇಲಾಖೆಗಳಿಂದ ಹೇಳಿಕೆಗಳು ಹೊರಬರಲಾರಂಭಿಸಿದ್ದು, ತಾಲಿಬಾನ್‌ಗಳ ಆಡಳಿತ ಹೇಗಿರಲಿದೆ ಎಂಬುದರ ಮುನ್ಸೂಚನೆ ಸಿಗಲಾರಂಭಿಸಿದೆ.

ಅಫ್ಗಾನಿಸ್ತಾನದ ಸಾಂಸ್ಕೃತಿಕ ಸಚಿವಾಲಯವು ತೆಗೆದುಕೊಂಡ ನಿರ್ಧಾರಗಳ ಪೈಕಿ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವುದೂ ಒಂದಾಗಿದೆ.

’ಮಹಿಳೆಯರು ಕ್ರಿಕೆಟ್ ಆಡುವುದು ಅನಿವಾರ್ಯವೇನಲ್ಲ. ಏಕೆಂದರೆ ಅವರು ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳಲು ಆಗದಂಥ ಪರಿಸ್ಥಿತಿಯನ್ನು ಕ್ರಿಕೆಟ್ ಆಟದ ವೇಳೆ ಎದುರಿಸಬೇಕಾಗಬಹುದು. ಇಸ್ಲಾಂ ಮಹಿಳೆಯರನ್ನು ಈ ರೀತಿ ನೋಡಲು ಒಪ್ಪುವುದಿಲ್ಲ’ ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಅವರು ಸುದ್ದಿ ವಾಹಿನಿ‘ಎಸ್‌ಬಿಎಸ್’ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ನಿರ್ಧಾರದಿಂದಾಗಿ ಅಫ್ಗಾನಿಸ್ತಾನದ ಮಹಿಳಾ ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ತಂಡಗಳು ಅನಿಶ್ಚಿತತೆ ಎದುರಿಸಬೇಕಾಗಿ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.