ಹಾಂಗ್‌ಕಾಂಗ್ (ಎಪಿ): ಹಿಂಸಾಚಾರ ವಿರೋಧಿಸಿ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ಹಾಂಗ್‌ಕಾಂಗ್‌ನಲ್ಲಿ ಕಳೆದ ಒಂಬತ್ತು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆ ಅಂತ್ಯಗೊಳ್ಳುವ ಸೂಚನೆಗಳಿಲ್ಲ.

ಭಾನುವಾರ ನಗರದ ಎರಡು ಕಡೆ ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಶಾಮ್ ಶೂಯಿ ಪೊ ಪ್ರದೇಶದಿಂದ ಹೊರನಡೆಯಬೇಕು ಎಂಬ ಸೂಚನೆ ಧಿಕ್ಕರಿಸಿ ಅಧಿಕಾರಿಗಳತ್ತ ಕಲ್ಲು ತೂರಿದ ಗುಂಪು ಚದುರಿಸಲು ಅಶ್ರುವಾಯು ಸಿಡಿಸಲಾಯಿತು.

ವಿಕ್ಟೋರಿಯ ಹಾರ್ಬರ್ ಬಳಿ ಸೇರಿದ ದೊಡ್ಡ ಗುಂಪು ಪ್ರಮುಖ ವಾಣಿಜ್ಯ ಚಟುವಟಿಕೆಯ ತಾಣವಾದ ಹೆನ್ನೆಸ್ಸೆ ರಸ್ತೆಯವರೆಗೂ ಮೆರವಣಿಗೆ ನಡೆಸಿತು. ವಿಕ್ಟೋರಿಯ ಪಾರ್ಕ್ ಬಳಿ ಸಮಾವೇಶ ನಡೆಸಲು ಪ್ರತಿಭಟನಾಕಾರರು ಉದ್ದೇಶಿಸಿದ್ದರು.

ಬಹುತೇಕರು ತಮ್ಮ ಗುರುತು ಮರೆಮಾಚಲು ಮುಖವಾಡ ಧರಿಸಿ
ದ್ದರು. ಕೆಲವರು ಹೆಲ್ಮೆಟ್ ಧರಿಸಿದ್ದರು. ಇನ್ನೂ ಕೆಲವರು ಸಮವಸ್ತ್ರವೇ ಆಗಿರುವ ಟೀ ಶರ್ಟ್ ಧರಿಸಿ ಬಂದಿದ್ದರು.

‘ಹಾಂಗ್‌ಕಾಂಗ್ ಈ ಮೊದಲಿನ ಹಾಂಗ್‌ಕಾಂಗ್ ಆಗಿಯೇ ಉಳಿದಿಲ್ಲ ಎಂಬುದು ಜಗತ್ತಿಗೆ ತಿಳಿಯಬೇಕು‘ ಎಂದು ಪ್ರತಿಭಟನೆಯಲ್ಲಿದ್ದ ಲೌಸಾ ಹೊ ಹೇಳಿದರು. ‘ಹಾಂಗ್‌ಕಾಂಗ್‌ನ ಜನರು, ಸಂಘಟನೆಗಳ ಮೇಲೆ ಚೀನಾ ಹೆಚ್ಚಿನ ಒತ್ತಡ ಹೇರುತ್ತಿದೆ‘ ಎಂದು ದೂರಿದರು.

ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಬೇಕು, ಬಂಧಿತ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಬೇಕು, ಪೊಲೀಸ್ ಹಿಂಸಾಚಾರದ ವಿರುದ್ಧ ತನಿಖೆ ನಡೆಸಬೇಕು ಎಂಬುದು ಪ್ರತಿಭಟನಾಕಾರರು ಬೇಡಿಕೆಗಳಲ್ಲಿ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.