ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್: ಹಮಾಸ್ ದಾಳಿ ಮಾಡಿದ್ದ ಪ್ರದೇಶಕ್ಕೆ ನೆತನ್ಯಾಹು ಜೊತೆ ಎಲಾನ್ ಮಸ್ಕ್ ಭೇಟಿ

Published 27 ನವೆಂಬರ್ 2023, 14:30 IST
Last Updated 27 ನವೆಂಬರ್ 2023, 14:30 IST
ಅಕ್ಷರ ಗಾತ್ರ

ಟೆಲ್ ಅವೀವ್(ಇಸ್ರೇಲ್): ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ಹಮಾಸ್ ದಾಳಿಗೆ ಒಳಗಾದ ಕ್ಫರ್ ಅಜಾಗೆ ಕರೆದೊಯ್ದಿದ್ದರು ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಹಮಾಸ್ ಉಗ್ರರಿಂದ ಈ ಪ್ರದೇಶದಲ್ಲಿ ಆಗಿರುವ ದಾಳಿಯ ಭೀಕರತೆಯನ್ನು ನೆತನ್ಯಾಹು ವಿವರಿಸಿದರು. ಉಗ್ರರ ದೌರ್ಜನ್ಯದ ಕುರಿತಾಗಿ ಸ್ಥಳಿಯ ಅಧಿಕಾರಿಗಳು ಸಹ ಮಸ್ಕ್‌ಗೆ ವಿವರಣೆ ನೀಡಿದರು.

ಅಕ್ಟೋಬರ್ 7ರಂದು, ಹಮಾಸ್ ಭಯೋತ್ಪಾದಕರು ಈ ಪ್ರದೇಶದ ಮೇಲೆ ದಾಳಿ ಮಾಡಿ ಹಲವು ಜನರನ್ನು ಕೊಂದಿದ್ದರು, ಸಂಪೂರ್ಣ ಮನೆಗಳನ್ನು ಸುಟ್ಟುಹಾಕಿದ್ದರು, ಇಲ್ಲಿನ ಹಲವು ನಾಗರಿಕರನ್ನು ಬಂಧಿಸಿ ಗಾಜಾಕ್ಕೆ ಕರೆದೊಯ್ದಿದ್ದರು.

‘ಹಮಾಸ್ ಮಾಡಿದ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಹತ್ತಿರದಿಂದ ತೋರಿಸಲು ನಾನು ಎಲಾನ್ ಮಸ್ಕ್ ಅವರೊಂದಿಗೆ ಕಿಬ್ಬುಟ್ಜ್ ಕ್ಫರ್ ಆಜಾಕ್ಕೆ ಪ್ರವಾಸ ಮಾಡಿದ್ದೇನೆ’ಎಂದು ನೆತನ್ಯಾಹು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದೇವೇಳೆ, ಉಗ್ರರ ದಾಳಿಯಲ್ಲಿ ಮೃತಪಟ್ಟ ಸ್ಥಳೀಯ ಸಮುದಾಯ ಭದ್ರತಾ ದಳದ ಮುಖ್ಯಸ್ಥ ಒಫಿರ್ ಲಿಬ್‌ಸ್ಟೈನ್ ಅವರ ನಿವಾಸಕ್ಕೂ ಮಸ್ಕ್ ಭೇಟಿ ನೀಡಿದರು. ಉಗ್ರರು ಗಾಜಾಕ್ಕೆ ಕರೆದೊಯ್ದು ಒತ್ತೆಯಾಳಾಗಿ ಇರಿಸಿಕೊಂಡಿದ್ದ ನಿನ್ನೆ ಬಿಡುಗಡೆ ಮಾಡಿರುವ 4 ವರ್ಷದ ಇಸ್ರೇಲಿ-ಅಮೆರಿಕನ್ ಮಗು ಅವಿಗೈಲ್ ಇಡಾನ್ ಅವರ ಮಾತುಗಳನ್ನು ಸಹ ಆಲಿಸಿದರು.

4 ವರ್ಷದ ಅಮೆರಿಕ ಬಾಲಕಿ ಅವಿಗೈಲ್ ಇಡಾನ್ ಸೇರಿದಂತೆ 13 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ನಂತರ, ಪ್ರತಿ ಒತ್ತೆಯಾಳು ತಮ್ಮ ಪ್ರೀತಿಪಾತ್ರರ ಬಳಿಗೆ ಹಿಂದಿರುಗುವುದನ್ನು ಖಚಿತಪಡಿಸಲು ಅಚಲವಾದ ಬದ್ಧತೆ ಪ್ರದರ್ಶಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಜ್ಞೆ ಮಾಡಿದ್ದರು.

‘ಪ್ರತಿಯೊಬ್ಬ ಒತ್ತೆಯಾಳು ಅವರ ಪ್ರೀತಿಪಾತ್ರರ ಬಳಿಗೆ ಹಿಂದಿರುಗುವವರೆಗೆ ನಾವು ನಮ್ಮ ಕಾರ್ಯದಿಂದ ವಿರಮಿಸುವುದಿಲ್ಲ. ಇದು ನನಗೆ ಮತ್ತು ನನ್ನ ತಂಡಕ್ಕೆ ಸಾಕಷ್ಟು ಕಠಿಣ ಪರಿಶ್ರಮದ ಸಮಯವಾಗಿದೆ’ಎಂದು ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT