ಆಸ್ಟಿನ್: ಕೊರೊನಾ ವೈರಸ್‌ನ ರೂಪಾಂತರ ತಳಿ ಓಮೈಕ್ರಾನ್ ಸೋಂಕು ತಗುಲಿರುವ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ಟೆಕ್ಸಾಸ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದಲ್ಲಿ ಓಮೈಕ್ರಾನ್‌ನಿಂದಾಗಿ ಸಂಭವಿಸಿದ ಮೊದಲ ಸಾವು ಇದು ಎಂದು ಭಾವಿಸಲಾಗಿರುವುದಾಗಿ ಆರೋಗ್ಯಾಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ‘ಎಬಿಸಿ ನ್ಯೂಸ್’ ವರದಿ ಮಾಡಿದೆ.
ಮೃತರು 50 ವರ್ಷ ವಯಸ್ಸಿನವರಾಗಿದ್ದು, ಕೋವಿಡ್ ಲಸಿಕೆ ಪಡೆದಿರಲಿಲ್ಲ ಎಂದು ವರದಿ ತಿಳಿಸಿದೆ.
ಡಿಸೆಂಬರ್ 18ಕ್ಕೆ ಕೊನೆಗೊಂಡಂತೆ ಒಂದು ವಾರದ ಅವಧಿಯಲ್ಲಿ ಅಮೆರಿಕದಾದ್ಯಂತ ಪತ್ತೆಯಾದ ಕೋವಿಡ್ ಪ್ರಕರಣಗಳ ಪೈಕಿ ಶೇ 73ರಷ್ಟು ಓಮೈಕ್ರಾನ್ ಪ್ರಕರಣಗಳು ಎಂದು ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ (ಸಿಡಿಸಿ) ಕೇಂದ್ರ ಈಗಾಗಲೇ ತಿಳಿಸಿದೆ.