ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ: ಜೀವ ಹಾನಿ ತಡೆಗೆ ಕ್ರಮ; ಇಸ್ರೇಲ್‌ಗೆ ವಿಶ್ವಸಂಸ್ಥೆಯ ಉನ್ನತ ಕೋರ್ಟ್‌ ಆದೇಶ

Published 26 ಜನವರಿ 2024, 16:11 IST
Last Updated 26 ಜನವರಿ 2024, 16:11 IST
ಅಕ್ಷರ ಗಾತ್ರ

ಹೇಗ್‌: ಗಾಜಾ ಪಟ್ಟಿಯಲ್ಲಿ ಸೇನೆಯಿಂದ ಜೀವ ಮತ್ತು ಆಸ್ತಿ ಹಾನಿ ಆಗುವುದನ್ನು ತಡೆಯಬೇಕು ಎಂದು ವಿಶ್ವಸಂಸ್ಥೆಯ ಉನ್ನತ ಕೋರ್ಟ್‌ ಶುಕ್ರವಾರ ಇಸ್ರೇಲ್‌ಗೆ ಒತ್ತಾಯಿಸಿದೆ.

ಇಸ್ರೇಲ್‌ ಸೇನೆಯಿಂದ ಗಾಜಾದಲ್ಲಿ ನರಮೇಧ ನಡೆದಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದ ದಕ್ಷಿಣ ಆಫ್ರಿಕಾ, ಗಾಜಾದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಇಸ್ರೇಲ್‌ಗೆ ಆದೇಶಿಸಬೇಕು ಎಂದು ಕೋರಿತ್ತು.

ಗಾಜಾದಲ್ಲಿ ಕದನ ವಿರಾಮಕ್ಕೆ ಕೋರ್ಟ್‌ ಆದೇಶಿಸಬಹುದು ಎಂದು ನಿರೀಕ್ಷೆ ಹುಸಿಯಾಯಿತು. ಆದರೆ, ಗಾಜಾದಲ್ಲಿ ಅತಿಕ್ರಮಣ ನಡೆಸಿರುವ ಇಸ್ರೇಲ್‌ನ ಸೇನೆ ಅಲ್ಲಿ ನರಮೇಧದಲ್ಲಿ ತೊಡಗಿದೆ ಎಂಬ ಆರೋಪವನ್ನು ಕೈಬಿಡುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿತು.

ಪ್ರಕರಣದ ವಿಚಾರಣೆ ನಡೆಸಿದ್ದ 17 ನ್ಯಾಯಮೂರ್ತಿಗಳ ಪೀಠದ ಪ್ರಾಥಮಿಕ ನಿರ್ಧಾರವನ್ನು ಪ್ರಕಟಿಸುವ ಕಲಾಪವನ್ನು ಅಂತರರಾಷ್ಟ್ರೀಯ ಕೋರ್ಟ್‌ನ ಅಧ್ಯಕ್ಷೆ ಜಾನ್‌ ಇ ಡೊನೊಗ್ ಆರಂಭಿಸಿದರು.

ಗಾಜಾ ವಲಯದಲ್ಲಿ ಸಂಭವಿಸಿರುವ ಮನುಕುಲದ ದುರಂತ ಹಾಗೂ ಅಲ್ಲಿ ನಿರಂತರವಾಗಿ ಆಗುತ್ತಿರುವ ಜೀವಹಾನಿ ಹಾಗೂ ಆಸ್ತಿನಷ್ಟದ ಅರಿವು ಅಂತರರಾಷ್ಟ್ರೀಯ ಕೋರ್ಟ್‌ಗಿದೆ ಎಂದು ಅಧ್ಯಕ್ಷೆ ಹೇಳಿದರು.  

ಶುಕ್ರವಾರ ಪ್ರಕಟಿಸಲಿರುವುದು ಮಧ್ಯಂತರ ಆದೇಶ. ಪ್ರಕರಣದ ವಿಚಾರಣೆ ಅಂತ್ಯಗೊಳ್ಳಲು ವರ್ಷಗಳೇ ಆಗಬಹುದು ಎನ್ನಲಾಗಿದೆ. ಆದರೆ, ನರಮೇಧ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಇಸ್ರೇಲ್‌, ಈ ಆರೋಪಗಳನ್ನು ಕೈಬಿಡಬೇಕು ಎಂದೂ ಮನವಿ ಮಾಡಿದೆ.

ಪ್ರಕರಣ ದಾಖಲಿಸಿದ್ದ ದಕ್ಷಿಣ ಆಫ್ರಿಕಾ, ‘ಗಾಜಾದಲ್ಲಿ ಪ್ಯಾಲೆಸ್ಟೀನಿಯರ ರಕ್ಷಣೆಗೆ ತುರ್ತು ಕ್ರಮವಹಿಸಬೇಕು ಹಾಗೂ ಸೇನೆ ಕಾರ್ಯಾಚರಣೆ ಸ್ಥಗಿತಕ್ಕೆ ಆದೇಶಿಸಬೇಕು‘ ಎಂದು ಕೋರಿತ್ತು. ಆದ್ಯತೆ ಮೇರೆಗೆ ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT