ವಾಷಿಂಗ್ಟನ್: ಅಮೆರಿಕದಲ್ಲಿ ನೆಲಸಿದ್ದ ಸುಮಾರು 3.5 ಲಕ್ಷ ವೆನಿಜುಯೆಲಾ ನಿವಾಸಿಗಳಿಗೆ ಇದ್ದ ತಾತ್ಕಾಲಿಕ ಗಡೀಪಾರು ರಕ್ಷಣೆಯನ್ನು ಡೊನಾಲ್ಡ್ ಟ್ರಂಪ್ ಆಡಳಿತವು ಹಿಂಪಡೆದಿದೆ. ಇದರೊಂದಿಗೆ, ಕೆಲಸದ ಹಕ್ಕು ಕಳೆದುಕೊಳ್ಳುವ ಎರಡು ತಿಂಗಳು ಮೊದಲೇ ಈ ನಿವಾಸಿಗಳು ಅಮೆರಿಕ ತೊರೆಯಬೇಕಾಗಿದೆ.

ಈ ಕುರಿತು ಆಂತರಿಕ ಭದ್ರತಾ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಇದರ ಪರಿಣಾಮ ವೆನಿಜುಯೆಲಾದ 3,48,202 ನಿವಾಸಿಗಳ ಮೇಲೆ ಆಗಲಿದೆ.

6 ಲಕ್ಷ ವೆನಿಜುಯೆಲಾ ಪ್ರಜೆಗಳಿಗೆ ಗಡೀಪಾರಿನಿಂದ ತಾತ್ಕಾಲಿಕ ರಕ್ಷಣೆ ಇತ್ತು. ಈ ಪೈಕಿ ಶೇ 50ರಷ್ಟು ಮಂದಿಗೆ ಅನ್ವಯಿಸಿ ಆದೇಶ ಹಿಂಪಡೆಯಲಾಗಿದೆ.

ಅಮೆರಿದಲ್ಲಿ ನಿಯಮಬಾಹಿರವಾಗಿ ನೆಲಸಿರುವ ಜನರನ್ನು ಹೊರಗೆ ಕಳುಹಿಸುವ ನಿಟ್ಟಿನಲ್ಲಿ ಟ್ರಂಪ್ ಆಡಳಿತ ಕೈಗೊಂಡಿರುವ ಹೊಸ ಕ್ರಮ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.