ವಾಂಷಿಗ್ಟನ್: ಶಿಕ್ಷಕರು, ವಕೀಲರು, ನಿವೃತ್ತ ಸೈನಿಕರು, ವಜಾಗೊಂಡ ಸರ್ಕಾರಿ ನೌಕರರು. ಮಕ್ಕಳು, ವೃದ್ಧರು, ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರರು ಒಂದೆಡೆ ಸೇರಿದ್ದರು.. ದೇಶದಾದ್ಯಂತ ಪ್ರಮುಖ ನಗರಗಳು ಮತ್ತು ಸಣ್ಣ ಪಟ್ಟಣಗಳಿಂದ ಗುಂಪು ಗುಂಪಾಗಿ ಆಗಮಿಸಿದ್ದ ಅವರು, ವೇಷಭೂಷಣಗಳಲ್ಲಿ ಕಾಣಿಸಿಕೊಂಡರು., ಸಂಗೀತ ನುಡಿಸುತ್ತಾ. ಅಮೆರಿಕ ಧ್ವಜ ಪ್ರದರ್ಶಿಸುತ್ತಾ ಹಾದುಹೋಗುವ ಕಾರುಗಳ ಹಾರ್ನ್ಗಳಿಗೆ ಪ್ರತಿಕ್ರಿಯಿಸುತ್ತಾ ಜೋರು ಶಬ್ದ ಮಾಡುತ್ತಿದ್ದರು.

ಕಿಕ್ಕಿರಿದು ಸೇರಿದ್ದ ಜನರು ಟ್ರಂಪ್ ಪ್ರತಿಕೃತಿ ಹಿಡಿದು ಘೋಷಣೆಗಳನ್ನು ಕೂಗಿದರು. ಅಮೆರಿಕದ ಸಾವಿರಾರು ಸ್ಥಳಗಳಲ್ಲಿ ಶನಿವಾರ ಕಂಡುಬಂದ ದೃಶ್ಯವಿದು. ರಾಜನಂತೆ ವರ್ತಿಸುವ ಅಧ್ಯಕ್ಷ ನಮಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಮೆರಿಕದಾದ್ಯಂತ ಶನಿವಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ವೈಖರಿ ಖಂಡಿಸಿ ನೋ ಕಿಂಗ್ಸ್ ಪ್ರತಿಭಟನೆ ನಡೆಯಿತು.

ಜೂನ್ನಲ್ಲಿಯೂ ಇದೇ ರೀತಿಯ ಪ್ರತಿಭಟನೆಗಳು ನಡೆದಿದ್ದವು. ಆದರೆ, ಈ ಬಾರಿ ಪ್ರತಿಭಟನಾಕಾರರ ಸಂಖ್ಯೆ ಬಹಳ ಪ್ರಮಾಣದಲ್ಲಿ ಹೆಚ್ಚಿತ್ತು. ವಲಸಿಗರ ಮೇಲೆ ದಾಳಿಗಳು, ನಗರಗಳಲ್ಲಿ ಫೆಡರಲ್ ಪಡೆಗಳ ನಿಯೋಜನೆ, ಸರ್ಕಾರದ ಕೆಲಸದಿಂದ ವಜಾ ಮತ್ತು ತೀವ್ರ ಬಜೆಟ್ ಕಡಿತಗಳ ಬಗ್ಗೆ ಆಕ್ರೋಶಗೊಂಡಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು.

ಆಡಳಿತವು ಕನಿಷ್ಠ ಮಾನವೀಯತೆ ತೋರಬೇಕು ಎಂದು ಅವರು ಒತ್ತಾಯಿಸಿದರು.

'ನಾವು ಸಮಸ್ಯೆಗಳನ್ನು ಪರಿಹರಿಸಬಹುದಾದ ನೀತಿಗಳು ಹಾಗೂ ಮಾರ್ಗಗಳ ಬಗ್ಗೆ ವಾದಿಸಬಹುದು ಮತ್ತು ಚರ್ಚಿಸಬಹುದು. ಆದರೆ, ನಾವು ಜನರ ಮೌಲ್ಯದ ಬಗ್ಗೆ ಚರ್ಚಿಸಬಾರದು’ ಎಂದು ಸಾಲ್ಟ್ ಲೇಕ್ ಸಿಟಿಯಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿದ್ದ ವಕೀಲ ಕ್ರಿಸ್ ಸ್ಕಾರ್ಮನ್ ಹೇಳಿದರು.

ವಾಷಿಂಗ್ಟನ್ ಡಿ.ಸಿ.ಯಂತಹ ಪ್ರಮುಖ ಮಹಾನಗರ ಪ್ರದೇಶಗಳಲ್ಲಿ ಪ್ರತಿಭಟನಾಕಾರರ ಸಂಖ್ಯೆ ಅಗಾಧವಾಗಿತ್ತು. ಅಟ್ಲಾಂಟಾದಲ್ಲಿ ನಡೆದ ರ್ಯಾಲಿಯಲ್ಲಿ ಮೂರು ನಗರಗಳ ಜನರು ಭಾಗವಹಿಸಿದ್ದರು. ಸ್ಯಾನ್ ಫ್ರಾನ್ಸಿಸ್ಕೊದಲ್ಲಿಯೂ ಅಪಾರ ಪ್ರಮಾಣದಲ್ಲಿ ಜನ ಸೇರಿದ್ದರು. ಷಿಕಾಗೋದಲ್ಲಿ ನಡೆದ ರ್ಯಾಲಿಯಲ್ಲಿ 1,00,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಇನ್ನು ಮುಂದೆ ಟ್ರಂಪ್ ಬೇಡ!’ ಎಂದು ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ನಿಂತ ಜನ ಘೋಷಣೆ ಕೂಗಿದರು.

‘ನೋ ಕಿಂಗ್ಸ್ ಡೇ’ ಎಂದು ಕರೆಯಲ್ಪಡುವ ಈ ಪ್ರತಿಭಟನೆಯು ಅಮೆರಿಕದ ಎಲ್ಲ 50 ರಾಜ್ಯಗಳಲ್ಲಿ ಸುಮಾರು 2,600 ಸ್ಥಳಗಳಲ್ಲಿ ನಡೆಯಿತು.

ಈ ಪ್ರತಿಭಟನೆಯನ್ನು ಖಂಡಿಸಿದ ರಿಪಬ್ಲಿಕನ್ ನಾಯಕರು, ‘ಇದು ಅಮೆರಿಕವನ್ನು ದ್ವೇಷಿಸುವ ರ್ಯಾಲಿ’ಎಂದು ಕರೆದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ತಂಡವು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಪ್ ಕಿರೀಟವನ್ನು ಧರಿಸಿರುವ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಚಿತ್ರಗಳನ್ನು ಪೋಸ್ಟ್ ಮಾಡಿ ಪ್ರತಿಭಟನಾಕಾರರನ್ನು ಟ್ರೋಲ್ ಮಾಡಿತು.

ಪ್ರತಿಭಟನೆ ಬಗ್ಗೆ ಅಧ್ಯಕ್ಷರು ಏನನ್ನಾದರೂ ಹೇಳುವುದಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ವಕ್ತಾರೆ ಅಬಿಗೈಲ್ ಜಾಕ್ಸನ್, ಇದನ್ನು ನಾವು ಕೇರ್ ಮಾಡಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.