ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Israel - Hamas War | ನೆತನ್ಯಾಹು ಜತೆ ಇನ್ನು ಮಾತುಕತೆ ಇಲ್ಲ: ಟರ್ಕಿ ಅಧ್ಯಕ್ಷ

Published 4 ನವೆಂಬರ್ 2023, 12:56 IST
Last Updated 4 ನವೆಂಬರ್ 2023, 12:56 IST
ಅಕ್ಷರ ಗಾತ್ರ

ಇಸ್ತಾಂಬುಲ್‌: ಗಾಜಾದ ಮೇಲೆ ದಾಳಿ ನಡೆಸುತ್ತಿರುವುದರಿಂದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜತೆ ಸಂಬಂಧ ಕಡಿದುಕೊಳ್ಳುವುದಾಗಿ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಶನಿವಾರ ಹೇಳಿದ್ದಾರೆ.

‘ನೆತನ್ಯಾಹು ಮಾತುಕತೆಗೆ ಅರ್ಹತೆ ಇರುವ ವ್ಯಕ್ತಿ ಅಲ್ಲ. ಅವರನ್ನು ನಾವು ಬಿಟ್ಟು ಬಿಟ್ಟಿದ್ದೇವೆ’ ಎಂದು ಟರ್ಕಿಯ ಮಾಧ್ಯಮ ಎರ್ಡೊಗನ್ ಅವರ ಹೇಳಿಕೆಯನ್ನು ವರದಿ ಮಾಡಿದೆ.

ಇಸ್ರೇಲ್–ಹಮಾಸ್‌ ಯುದ್ಧದ ಬಗ್ಗೆ ಎರ್ಡೊಗನ್ ಅವರು ಸತತವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಟರ್ಕಿಯ ಜತೆ ಸಂಬಂಧಗಳನ್ನು ಮರುಪರಿಶೀಲನೆ ಮಾಡುತ್ತೇವೆ ಎಂದು ಇಸ್ರೇಲ್ ಹೇಳಿತ್ತು. ಇದಾದ ಒಂದೇ ವಾರದಲ್ಲಿ ಎರ್ಡೊಗನ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಇದಲ್ಲದೆ ಟರ್ಕಿ ಸಹಿತ ಇತರೆ ದೇಶಗಳೊಂದಿಗೆ ಇಸ್ರೇಲ್‌ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತ್ತು. ಭದ್ರತಾ ದೃಷ್ಟಿಯಿಂದ ಹೀಗೆ ಮಾಡಿದ್ದಾಗಿ ಇಸ್ರೇಲ್ ಹೇಳಿತ್ತು.

‘ಇಸ್ರೇಲ್ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ನಾವು ಕಡಿದುಕೊಂಡಿಲ್ಲ. ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಸಂಪೂರ್ಣ ಸಂಬಂಧ ಕಡಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಎರ್ಡೊಗನ್‌ ಹೇಳಿದ್ದಾರೆ.

ಎಲ್ಲಾ ಹಿಂಸಾಚಾರಗಳಿಗೆ ನೆತನ್ಯಾಹು ಅವರೇ ಕಾರಣ ಎಂದು ದೂರಿರುವ ಅವರು, ತಮ್ಮ ಸ್ವಂತ ನಾಗರಿಕ ಬೆಂಬಲವನ್ನು ನೆತನ್ಯಾಹು ಕಳೆದುಕೊಂಡಿದ್ದಾರೆ ಎಂದಿದ್ದಾರೆ.

‘ಅವರು ಮಾಡಬೇಕಾಗಿರುವುದು ಇಷ್ಟೇ. ಹಿಂದೆ ಸರಿದು ಇದನ್ನೆಲ್ಲಾ ನಿಲ್ಲಿಸಬೇಕು’ ಎಂದು ಎರ್ಡೊಗನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT