ಹೂಸ್ಟನ್ (ಪಿಟಿಐ): ವಾರಾಂತ್ಯದ ರಜೆಯಲ್ಲಿ, ಮಿಸೌರಿ ರಾಜ್ಯದ ಒಝಾರ್ಕ್ ಸರೋವರದಲ್ಲಿ ಈಜಲು ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

‘ತೆಲಂಗಾಣ ರಾಜ್ಯದವರಾದ ಉತ್ತೇಜ್ ಕುಂಟ (24) ಮತ್ತು ಶಿವ ಕೆಲ್ಲಿಗಾರಿ (25) ಮೃತಪಟ್ಟ ವಿದ್ಯಾರ್ಥಿಗಳಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಘಟನೆಯು ಶನಿವಾರ ನಡೆದಿದೆ. ಉತ್ತೇಜ್ ಅವರು ಮೊದಲಿಗೆ ಸರೋವರದಲ್ಲಿ ಈಜಲು ತೆರಳಿದರು. ಕೆಲ ಹೊತ್ತಿನಲ್ಲಿ ಮುಳುಗಲು ಆರಂಭಿಸಿದರು. ಸ್ನೇಹಿತನನ್ನು ಕಾಪಾಡಲು ಸರೋವರಕ್ಕೆ ಧುಮುಕಿದ ಶಿವ ಕೂಡ ಮುಳುಗಿದರು. ಉತ್ತೇಜ್ ಅವರ ಮೃತದೇಹವು ಎರಡು ಗಂಟೆಗಳ ಒಳಗಾಗಿಯೇ ಸಿಕ್ಕಿತು. ಆದರೆ, ಶಿವ ಅವರ ಮೃತದೇಹವು ಭಾನುವಾರ ದೊರಕಿತು’ ಎಂದು ಮಾಹಿತಿ ನೀಡಿದರು.

ಮೃತದೇಹಗಳನ್ನು ಭಾರತಕ್ಕೆ ವಾಪಾಸು ತರಿಸಿಕೊಳ್ಳಲುಕುಟುಂಬದವರಿಗೆ ಬೇಕಾದ ಅಗತ್ಯ ಸಹಾಯವನ್ನು ಮಾಡುವಂತೆ ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಅವರು ತಮ್ಮ ಕಾರ್ಯಕರ್ತರಿಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.