ಲಂಡನ್/ಮ್ಯಾಡ್ರಿಡ್: ರಷ್ಯಾ ಆಕ್ರಮಣವನ್ನು ಎದುರಿಸಲು ಉಕ್ರೇನ್ಗೆ ಬ್ರಿಟನ್ ಮತ್ತು ಅಮೆರಿಕ ಮತ್ತೊಮ್ಮೆ ಭಾರಿ ಮೊತ್ತದ ಸೇನಾ ನೆರವನ್ನು ಘೋಷಿಸಿವೆ.

ಮಾಡ್ರಿಡ್ನಲ್ಲಿ ಗುರುವಾರ ನ್ಯಾಟೊ ನಾಯಕರ ಶೃಂಗಸಭೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಉಕ್ರೇನ್ಗೆಸುಮಾರು ₹9,600 ಕೋಟಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸುಮಾರು ₹6300 ಕೋಟಿ ಮೊತ್ತದ ಸೇನಾ ನೆರವು ಪ್ರಕಟಿಸಿದರು.

ಈ ಹೊಸ ಪ್ಯಾಕೇಜ್ನಲ್ಲಿ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳು, ಕೌಂಟರ್ ಬ್ಯಾಟರಿ ರೆಡಾರ್ಗಳು ಮತ್ತು ಹಿಮಾರ್ಸ್ ರಾಕೆಟ್ ವ್ಯವಸ್ಥೆಗಳಿಗೆ ಹೆಚ್ಚುವರಿ ಮದ್ದುಗುಂಡುಗಳು ಒಳಗೊಂಡಿವೆ. ಈಗಾಗಲೇ ಇಷ್ಟು ಶಸ್ತ್ರಾಸ್ತ್ರಗಳನ್ನು ಉಕ್ರೇನ್ಗೆ ಕಳುಹಿಸಿಕೊಡಲಾಗಿದೆ ಎಂದು ಬೈಡನ್ ಹೇಳಿದರು.

ರಷ್ಯಾ ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಈವರೆಗೆ ಅಮೆರಿಕ 14 ಬಾರಿ ಶಸ್ತ್ರಾಸ್ತ್ರ ನೆರವಿನ ಪ್ಯಾಕೇಜ್ ನೀಡಿದೆ. ಉಕ್ರೇನ್ಗೆ ಆರ್ಥಿಕ ಮತ್ತು ಭದ್ರತಾ ನೆರವು ನೀಡುವ ಸುಮಾರು ₹31 ಸಾವಿರ ಕೋಟಿ ಪ್ಯಾಕೇಜ್ಗೆ ಕಳೆದ ತಿಂಗಳಷ್ಟೇ ಬೈಡನ್ ಸಹಿ ಹಾಕಿದ್ದು, ಅಮೆರಿಕ ಕಾಂಗ್ರೆಸ್ ಅನುಮೋದನೆ ನೀಡಿತ್ತು.

ಈಗಿನ ಹಣಕಾಸು ನೆರವು ಉಕ್ರೇನ್ಗೆ ಅಂತರರಾಷ್ಟ್ರೀಯ ಸಮುದಾಯದಿಂದ ಲಭಿಸುತ್ತಿರುವ ಹೊಸ ಮಜಲಿನ ಬೃಹತ್ ಬೆಂಬಲವಾಗಿದೆ. ಈ ನೆರವು ಉಕ್ರೇನ್ ಸೇನೆಯ ಸಾಮರ್ಥ್ಯ ಹೆಚ್ಚಿಸುವ ಉದ್ದೇಶ ಹೊಂದಿದೆ.

ಬ್ರಿಟನ್ ಹೊಸದಾಗಿ ಘೋಷಿಸಿರುವ ನೆರವು ಪ್ಯಾಕೇಜ್ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ, ಮಾನವ ರಹಿತ ವೈಮಾನಿಕ ವಾಹನಗಳು, ನವೀನ ಮಾದರಿಯ ಹೊಸ ಎಲೆಕ್ಟ್ರಾನಿಕ್ ಯುದ್ಧೋಪಕರಣಗಳು ಹಾಗೂ ಸೈನಿಕರಿಗೆ ರಕ್ಷಣೆ ನೀಡುವ ಸಾವಿರಾರು ಸಂಖ್ಯೆಯ ಸೇನಾ ಕಿಟ್ಗಳನ್ನು ಒಳಗೊಂಡಿದೆ. ಬ್ರಿಟನ್ ಈವರೆಗೆ ಸುಮಾರು ₹22 ಸಾವಿರ ಕೋಟಿಯ ಸೇನಾ ನೆರವನ್ನು ಉಕ್ರೇನ್ಗೆ ನೀಡಿದೆ.

‘ಉಕ್ರೇನ್ ಜನರ ಜೀವ ಬಲಿ ತೆಗೆದುಕೊಳ್ಳುವರಷ್ಯಾ ಅಧ್ಯಕ್ಷ ಪುಟಿನ್ ಅವರ ಕ್ರೌರ್ಯ ಮುಂದುವರಿದಿದೆ. ಅಲ್ಲದೇ, ಯುರೋಪ್ನಾದ್ಯಂತ ಶಾಂತಿ ಮತ್ತು ಭದ್ರತೆಗೂ ಆತಂಕ ಎದುರಾಗಿದೆ’ ಬೋರಿಸ್ ಜಾನ್ಸನ್ ಹೇಳಿದ್ದಾರೆ.

6 ಸಾವಿರ ಉಕ್ರೇನ್ ಸೈನಿಕರ ಶರಣಾಗತಿ: ಉಕ್ರೇನಿನ 6 ಸಾವಿರಕ್ಕೂ ಹೆಚ್ಚು ಸೈನಿಕರು ಶರಣಾಗಿದ್ದಾರೆ (ಸೆರೆ ಹಿಡಿಯಲಾಗಿದೆ) ಎಂದು ರಷ್ಯಾ ರಕ್ಷಣಾ ಸಚಿವಾಲಯ ಗುರುವಾರ ನೀಡಿರುವ ಮಾಹಿತಿ ಉಲ್ಲೇಖಿಸಿ ‘ರಿಯಾ’ ಸುದ್ದಿಸಂಸ್ಥೆ ವರದಿ ಮಾಡಿದೆ. ಪುಟಿನ್ ಆದೇಶದ ಮೇರೆಗೆ 144 ಯುದ್ಧ ಕೈದಿಗಳನ್ನು ಉಕ್ರೇನ್ ಜತೆಗೆ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಕೊನೆ ಭದ್ರಕೋಟೆ ವಶಕ್ಕೆ ರಷ್ಯಾ ಸೇನೆ ಹೋರಾಟ: ಉಕ್ರೇನ್ ಪೂರ್ವದ ಲುಹಾನ್ಸ್ಕ್ ಮತ್ತು ಡಾನ್ಬಾಸ್ ಮೇಲೆ ನಿಯಂತ್ರಣ ಸಾಧಿಸಿರುವ ರಷ್ಯಾ ಸೇನೆ, ಪೂರ್ವ ಪ್ರಾಂತ್ಯದ ಕೊನೆಯ ಭದ್ರಕೋಟೆ ಎನಿಸಿರುವ ಲಿಸಿಚಾನ್ಸ್ಕ್ ನಗರವನ್ನು ಕೈವಶ ಮಾಡಿಕೊಳ್ಳಲು ಗುರುವಾರ ಕಾರ್ಯಾಚರಣೆ ತೀವ್ರಗೊಳಿಸಿದೆ.

ಲಿಸಿಚಾನ್ಸ್ಕ್ ನಗರದ ಮೇಲೆ ರಷ್ಯಾ ಪಡೆಗಳು ಶೆಲ್ ದಾಳಿ ನಡೆಸುತ್ತಿದೆ. ನಗರದ ಅಂಚಿನಲ್ಲಿರುವ ತೈಲಾಗಾರದ ಬಳಿ ಉಕ್ರೇನ್ ಯೋಧರು ಮತ್ತು ರಷ್ಯಾ ಸೈನಿಕರ ನಡುವೆ ಹೋರಾಟ ತೀವ್ರಗೊಂಡಿದೆ ಎಂದು ಉಕ್ರೇನ್ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.