ಕೀವ್: ಯುದ್ಧಪೀಡಿತ ಉಕ್ರೇನ್‌ನಲ್ಲಿ ಈ ಬಾರಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಸರ್ಕಾರ ನಿರ್ಬಂಧ ಹೇರಿದೆ.

ರಾಜಧಾನಿಯಲ್ಲಿ ಜನರು ಸೇರಿದರೆ, ರಷ್ಯಾ ದಾಳಿ ನಡೆಸುವ ಭೀತಿಯಿದ್ದು, ಹೀಗಾಗಿ ಯಾವುದೇ ರೀತಿಯ ಸಾರ್ವಜನಿಕ ಆಚರಣೆಗೆ ಸರ್ಕಾರ ಅವಕಾಶ ನೀಡಿಲ್ಲ.

ಸೋವಿಯತ್ ಒಕ್ಕೂಟದಿಂದ ಉಕ್ರೇನ್ ಪ್ರತ್ಯೇಕಗೊಂಡ ಸಲುವಾಗಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಸಲಾಗುತ್ತದೆ.

ಆದರೆ, ಈ ಬಾರಿ ಬುಧವಾರ ನಡೆಯಬೇಕಿದ್ದ 31ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ದಾಳಿ ಭೀತಿ ಇರುವುದರಿಂದ ಕೀವ್‌ನಲ್ಲಿ ಯಾವುದೇ ಬಹಿರಂಗ ಆಚರಣೆ ಇರುವುದಿಲ್ಲ.

ಪುಟಿನ್ ಆಪ್ತನ ಮಗಳು ಡೇರಿಯಾ ಡುಗಿನಾ ಕೊಲೆ ಮಾಡಿಸಿದ್ದು ಉಕ್ರೇನ್: ರಷ್ಯಾ ಆರೋಪ

ರಷ್ಯಾ, ಉಕ್ರೇನ್ ಮೇಲೆ ದಾಳಿ ಆರಂಭಿಸಿ ಸುಮಾರು ಆರು ತಿಂಗಳಾಗುತ್ತಾ ಬಂದಿದ್ದು, ಇನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಸೇನೆ ವಾಪಸಾತಿ ನಡೆದಿಲ್ಲ. ಉಕ್ರೇನ್‌ನ ಹಲವು ಪಟ್ಟಣಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜತೆಗೆ ನಿಗದಿತ ಅವಧಿಗೆ ಕರ್ಫ್ಯೂ ಸಡಿಲಿಸಲಾಗುತ್ತದೆ.

ಉಕ್ರೇನ್ ಸ್ವಾತಂತ್ರ್ಯೋತ್ಸವದಂದು ರಷ್ಯಾದ ಕ್ರೂರ ದಾಳಿ: ಝೆಲೆನ್ಸ್ಕಿ ಎಚ್ಚರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.