ಕೀವ್ : ರಷ್ಯಾ ಪಡೆಗಳು ಮಂಗಳವಾರ ನಸುಕಿನಲ್ಲಿ ಉಡಾಯಿಸಿದ ಸ್ವಯಂ ಸ್ಫೋಟದ 35 ಶಾಹಿದ್ ಡ್ರೋನ್ಗಳ ಪೈಕಿ 32 ಡ್ರೋನ್ಗಳನ್ನು ಉಕ್ರೇನ್ ವಾಯು ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್ ರಾಜಧಾನಿ ಕೀವ್ ಸುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಪಡೆಗಳು ರಾತ್ರಿ ವೇಳೆ ಡ್ರೋನ್ ದಾಳಿ ನಡೆಸಿವೆ. ದಾಳಿಯ ಗುರಿ, ರಾಜಧಾನಿಗೆ ದೂರದ ಮತ್ತು ನೆರೆಯ ದೇಶ ಪೋಲೆಂಡ್ ಗಡಿಗೆ ಸನಿಹದ ಲುವಿವ್ ನಗರದವರೆಗೂ ವಿಸ್ತರಿಸಿತ್ತು. ಬಹುತೇಕ ಎಲ್ಲ ಡ್ರೋನ್ಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಹೊಡೆದು ಹಾಕಲಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

ಲುವಿವ್ ನಗರದ ಕೆಲವು ಪ್ರಮುಖ ಮೂಲಸೌಕರ್ಯಗಳ ಮೇಲೆ ರಷ್ಯಾದಿಂದ ಡ್ರೋನ್ ದಾಳಿ ನಡೆದಿದ್ದು, ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ನಗರದ ಗವರ್ನರ್ ಮಾಕ್ಸಿಮ್ ಕೊಜಿಟ್ಸ್ಕಿ ಹೇಳಿದ್ದಾರೆ.

ಲುವಿವ್ ನಗರಕ್ಕೆ ಕೆಲವು ಡ್ರೋನ್ಗಳು ಅಪ್ಪಳಿಸುವುದನ್ನು ತಡೆಯುವಲ್ಲಿ ವಾಯು ರಕ್ಷಣಾ ವ್ಯವಸ್ಥೆ ಅಸಮರ್ಥವಾಗಿರುವುದನ್ನು ಉಕ್ರೇನ್ ವಾಯುಪಡೆ ವಕ್ತಾರ ಯೂರಿ ಇಹ್ನಾಟ್ ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.