ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್‌ ಡ್ರೋನ್ ದಾಳಿಗೆ ರಷ್ಯಾದ ಐವರ ಸಾವು

Published 29 ಜೂನ್ 2024, 16:35 IST
Last Updated 29 ಜೂನ್ 2024, 16:35 IST
ಅಕ್ಷರ ಗಾತ್ರ

ಮಾಸ್ಕೊ: ಉಕ್ರೇನ್‌ ನಡೆಸಿದ ಡ್ರೋನ್ ದಾಳಿಗೆ ರಷ್ಯಾದ ಗಡಿ ಪ್ರದೇಶದ ಮನೆಯೊಂದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿರುವುದಾಗಿ ಪ್ರಾದೇಶಿಕ ಗವರ್ನರ್ ಶನಿವಾರ ತಿಳಿಸಿದ್ದಾರೆ.

ಉಕ್ರೇನ್ ಗಡಿ ಸಮೀಪವಿರುವ ರಷ್ಯಾದ ಕುರ್ಸೆಕ್ ಪ್ರದೇಶದ ಗೊರೊಡಿಶ್ ಗ್ರಾಮದ ಮನೆಯೊಂದರ ಮೇಲೆ ಡ್ರೋನ್ ಅಪ್ಪಳಿಸಿದೆ.

‘ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿದ್ದು, ಕುಟುಂಬದ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ‘ಕಾಪ್ಟರ್’ ಮಾದರಿಯ ಡ್ರೋನ್‌ ಬಳಸಿ ದಾಳಿ ನಡೆಸಲಾಗಿದೆ’ ಎಂದು ಕುರ್ಸೆಕ್ ಗವರ್ನರ್ ಅಲೆಕ್ಸಿ ಸ್ಮಿರ್ನೋವ್ ತಿಳಿಸಿದ್ದಾರೆ.

ಉಕ್ರೇನ್ ಈ ವರ್ಷ ರಷ್ಯಾದ ಭೂಪ್ರದೇಶದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ರಷ್ಯಾ ಸೇನೆಗೆ ಇಂಧನವನ್ನು ಪೂರೈಸುವ ತೈಲ ಘಟಕಗಳು ಮತ್ತು ಗಡಿ ಸಮೀಪದ ನಗರ ಹಾಗೂ ಗ್ರಾಮಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT