ವಾಷಿಂಗ್ಟನ್: 'ರಷ್ಯಾ ವಿರುದ್ಧದ ಸಂಘರ್ಷದಲ್ಲಿ ಕದನ ವಿರಾಮಕ್ಕೆ ಉಕ್ರೇನ್ ಸಮ್ಮತಿ ಸೂಚಿಸಿದ್ದು, ರಷ್ಯಾದಿಂದಲೂ ಇದನ್ನು ನಿರೀಕ್ಷೆ ಮಾಡುತ್ತಿದ್ದೇವೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ 'ಎಎನ್ಐ' ವರದಿ ಮಾಡಿದೆ.

ಸೌದಿ ಅರೇಬಿಯಾದಲ್ಲಿ ಜೆದ್ದಾದಲ್ಲಿ ಮಂಗಳವಾರ ನಡೆದ ಮಹತ್ವದ ಮಾತುಕತೆಯಲ್ಲಿ 30 ದಿನಗಳ ತಾತ್ಕಾಲಿಕ ಕದನ ವಿರಾಮ ಒಪ್ಪಂದವನ್ನು ಉಕ್ರೇನ್ ಒಪ್ಪಿಕೊಂಡಿದ್ದು, ಈ ಸಂಬಂಧ ಅಮೆರಿಕ-ಉಕ್ರೇನ್ ಅಧಿಕಾರಿಗಳು ಬಿಡುಗಡೆಗೊಳಿಸಿದ ಜಂಟಿ ಪ್ರಕಟಣೆ ತಿಳಿಸಿದೆ.

ಈ ಕುರಿತು ವಾಷಿಂಗ್ಟನ್ನಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್, 'ಕದನ ವಿರಾಮ ಅತ್ಯಂತ ಮುಖ್ಯವಾಗಿದೆ. ಉಕ್ರೇನ್ ಈಗಷ್ಟೇ ಯುದ್ಧ ನಿಲ್ಲಿಸಲು ಒಪ್ಪಿಕೊಂಡಿದೆ. ಈಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹ ಇದೇ ನಿಲುವು ತೆಗೆದುಕೊಳ್ಳುವುದಾಗಿ ಭಾವಿಸುತ್ತೇನೆ. ಈ ಭಯಾನಕ ಯುದ್ಧವನ್ನು ನಾವು ನಿಲ್ಲಿಸಬೇಕಿದೆ' ಎಂದು ಹೇಳಿದ್ದಾರೆ.

'ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜನರು ಸಾವಿಗೀಡಾಗುತ್ತಿದ್ದಾರೆ. ಹಾಗಾಗಿ ಆದಷ್ಟು ಬೇಗ ಕದನ ವಿರಾಮ ಜಾರಿಗೆ ತರಬೇಕು' ಎಂದು ಅವರು ಹೇಳಿದ್ದಾರೆ.

ಜೆದ್ದಾದಲ್ಲಿ ಅಮೆರಿಕ ಮುಂದಿರಿಸಿದ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿರುವ ಉಕ್ರೇನ್, ತತ್ಕ್ಷಣದಿಂದ 30 ದಿನಗಳ ತಾತ್ಕಾಲಿಕ ಕದನ ವಿರಾಮವನ್ನು ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯೆ ಶ್ವೇತಭವನದಲ್ಲಿ ಈಚೆಗೆ ನಡೆದಿದ್ದ ಮಾತುಕತೆಯಲ್ಲಿ ವಾಗ್ವಾದ ನಡೆದಿತ್ತು. ಆ ಬಳಿಕ ರಷ್ಯಾ ವಿರುದ್ಧದ ಯುದ್ಧ ಅಂತ್ಯಾಗಾಣಿಸುವಲ್ಲಿ ಅಮೆರಿಕ-ಉಕ್ರೇನ್ ನಡುವೆ ನಡೆದ ಮೊದಲ ಮಾತುಕತೆ ಇದಾಗಿತ್ತು.
.ನಾಳೆ ಸೌದಿಯಲ್ಲಿ ಉಕ್ರೇನ್–ಅಮೆರಿಕ ಮಾತುಕತೆ.ಎಲಾನ್ ಮಸ್ಕ್ಗೆ ಬೆಂಬಲವಾಗಿ ಹೊಸ ‘ಟೆಸ್ಲಾ’ ಕಾರು ಖರೀದಿಸಲಿರುವ ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.