ಕೀವ್: ಜಿ7 ರಾಷ್ಟ್ರಗಳು ಭರವಸೆಯಂತೆ ಯುರೋಪಿಯನ್ ಒಕ್ಕೂಟದಿಂದ ಅಂದಾಜು ₹ 25 ಸಾವಿರ ಕೋಟಿ (3 ಬಿಲಿಯನ್ ಡಾಲರ್) ಸಾಲ ಸ್ವೀಕರಿಸಲಾಗಿದೆ ಎಂದು ಉಕ್ರೇನ್ ಪ್ರಧಾನಿ ಡೆನಿಸ್ ಶ್ಯಾಮ್ಹಲ್ ಶುಕ್ರವಾರ ಹೇಳಿದ್ದಾರೆ.

ಯುರೋಪಿಯನ್ ಒಕ್ಕೂಟ ನೀಡಿದ ಆರ್ಥಿಕ ನೆರವಿನ ಮೊದಲ ಕಂತು ಇದಾಗಿದೆ ಎಂದು ಅವರು ಟೆಲಿಗ್ರಾಂನಲ್ಲಿ ತಿಳಿಸಿದ್ದಾರೆ.

ಇಟಲಿಯ ಬಾರಿಯಲ್ಲಿ 2024ರ ಜೂನ್ನಲ್ಲಿ ನಡೆದ ಜಿ–7 ದೇಶಗಳ ಶೃಂಗ ಸಭೆಯಲ್ಲಿ ಉಕ್ರೇನ್ಗೆ ನೆರವು ನೀಡುವ ಬಗ್ಗೆ ಮಾತುಕತೆಯಾಗಿತ್ತು.

ರಷ್ಯಾ ವಿರುದ್ಧ ಸೆಣಸುತ್ತಿರುವ ಉಕ್ರೇನ್ಗೆ, ವರ್ಷಾಂತ್ಯದ ಹೊತ್ತಿಗೆ ಅಂದಾಜು ₹ 4.2 ಲಕ್ಷ ಕೋಟಿ (50 ಬಿಲಿಯನ್ ಡಾಲರ್) ನೆರವು ಸಿಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿ7 ರಾಷ್ಟ್ರಗಳು ಹೇಳಿದ್ದವು.

2022ರ ಫೆಬ್ರುವರಿಯಿಂದ ರಷ್ಯಾ ಹಾಗೂ ಉಕ್ರೇನ್ ಸಂಘರ್ಷ ನಡೆಸುತ್ತಿವೆ.
.ಸೇನೆ ಸೇರದೆ ದೇಶ ತೊರೆಯುತ್ತಿರುವ ಪುರುಷರು; ಕಾರ್ಯಾಚರಣೆಗಿಳಿದ ಉಕ್ರೇನ್ ಪೊಲೀಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.