ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಸಿವ್‌ನಿಂದ ಸೇನೆ ಹಿಂಪಡೆದ ರಷ್ಯಾ

Published 4 ಜುಲೈ 2024, 15:58 IST
Last Updated 4 ಜುಲೈ 2024, 15:58 IST
ಅಕ್ಷರ ಗಾತ್ರ

ಕೀವ್‌: ಭದ್ರತೆ ದೃಷ್ಟಿಯಿಂದ ಮಹತ್ವ ಪಡೆದಿರುವ ಚಾಸಿವ್‌ ಯಾರ್‌ ಪಟ್ಟಣವನ್ನು ರಷ್ಯಾ ಸೇನೆಯು ವಶಕ್ಕೆ ತೆಗೆದುಕೊಳ್ಳುವುದು ಸನ್ನಿಹಿತವಾಗುತ್ತಿರುವ ಕಾರಣ, ಅಲ್ಲಿ ನಿಯೋಜಿಸಲಾಗಿದ್ದ ತನ್ನ ಸೇನೆಯನ್ನು ಹಿಂದೆ ಕರೆಸಿಕೊಂಡಿರುವುದಾಗಿ ಉಕ್ರೇನ್‌ ಸೇನೆಯ ವಕ್ತಾರರೊಬ್ಬರು ತಿಳಿಸಿದ್ದಾರೆ. 

ಡೊನೆಟಕ್ಸ್‌ ಪ್ರದೇಶದಲ್ಲಿರುವ ಚಾಸಿವ್‌ ಯಾರ್‌ ಪಟ್ಟಣವು ಪಶ್ಚಿಮ ಭಖ್ಮುತ್ ಸನಿಹ ಇದೆ. ಕಳೆದ ವರ್ಷ ರಷ್ಯಾವು ಬಖ್ಮುತ್‌ ಅನ್ನು ವಶಕ್ಕೆ ತೆಗೆದುಕೊಂಡಿತ್ತು. ಈಗ ಚಾಸಿವ್‌ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ದಾಳಿ ನಡೆಸುತ್ತಿದೆ.

ಉಕ್ರೇನ್‌ ರೂಪಿಸಿದ್ದ ಭದ್ರತಾ ವ್ಯವಸ್ಥೆಯನ್ನು ರಷ್ಯಾ ನಾಶಪಡಿಸಿದೆ. ಸೇನಾ ಪಡೆಗಳನ್ನು ಅಲ್ಲಿಯೇ ಬಿಟ್ಟರೆ ಸಾವು– ನೋವು ಸಂಭವಿಸುವ ಸಾಧ್ಯತೆಯಿತ್ತು. ಹೀಗಾಗಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT