ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಮುಕ್ತ–ಪಾರದರ್ಶಕ ಮತದಾನ ನಡೆಯುವ ವಿಶ್ವಾಸದಲ್ಲಿ ವಿಶ್ವಸಂಸ್ಥೆ

Published 29 ಮಾರ್ಚ್ 2024, 7:39 IST
Last Updated 29 ಮಾರ್ಚ್ 2024, 7:39 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಭಾರತ ಹಾಗೂ ಚುನಾವಣೆ ನಡೆಯಲಿರುವ ಇತರ ರಾಷ್ಟ್ರಗಳಲ್ಲಿ ಜನರ 'ರಾಜಕೀಯ ಮತ್ತು ನಾಗರಿಕ' ಹಕ್ಕುಗಳ ರಕ್ಷಣೆಯಾಗಬೇಕು. ಪ್ರತಿಯೊಬ್ಬರೂ 'ಮುಕ್ತ ಮತ್ತು ಪಾರದರ್ಶಕ' ವಾತಾವರಣದಲ್ಲಿ ಮತದಾನ ಮಾಡುವಂತಿರಬೇಕು ಎಂದು ವಿಶ್ವಸಂಸ್ಥೆ ಹೇಳಿದೆ.

ಲೋಕಸಭೆ ಚುನಾವಣೆ ಹೊತ್ತಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಕೆಲವು ಬ್ಯಾಂಕ್‌ ಖಾತೆಗಳ ಸ್ಥಗಿತ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರ ವಕ್ತಾರ ಸ್ಟೀಫನ್‌ ಡುಜಾರಿಕ್‌ ಪ್ರತಿಕ್ರಿಯಿಸಿದ್ದಾರೆ.

ದೈನಂದಿನ ಮಾಧ್ಯಮ ಹೇಳಿಕೆ ಬಿಡುಗಡೆ ವೇಳೆ ಗುರುವಾರ ಮಾತನಾಡಿರುವ ಡುಜಾರಿಕ್‌, 'ಚುನಾವಣೆ ನಡೆಯಲಿರುವ ಇತರ ರಾಷ್ಟ್ರಗಳಂತೆಯೇ ಭಾರತದಲ್ಲಿ ರಾಜಕೀಯ ಮತ್ತು ನಾಗರಿಕ ಹಕ್ಕುಗಳು, ಮತದಾನ ಮಾಡಲು ಮುಕ್ತ ಮತ್ತು ಪಾರದರ್ಶಕ ವಾತಾವರಣ ಸೇರಿದಂತೆ ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಲಾಗಿದೆ ಎಂದು ಭಾವಿಸುತ್ತೇವೆ' ಎಂದಿದ್ದಾರೆ.

ಕೇಜ್ರಿವಾಲ್ ಬಂಧನ ಹಾಗೂ ಕಾಂಗ್ರೆಸ್‌ ಬ್ಯಾಂಕ್‌ ಖಾತೆಗಳ ವಿಚಾರವಾಗಿ ಅಮೆರಿಕವೂ ಇದೇ ರೀತಿಯ ಪ್ರತಿಕ್ರಿಯೆ ನೀಡಿತ್ತು.

ಕಾನೂನು ಪ್ರಕ್ರಿಯೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಮಂಗಳವಾರ ಹೇಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಭಾರತ, ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಹಂಗಾಮಿ ಉಪ ಮುಖ್ಯಸ್ಥೆ ಗ್ಲಾರಿಯಾ ಬರ್ಬೆನಾ ಅವರಿಗೆ ಬುಧವಾರ ಸಮನ್ಸ್‌ ನೀಡಿತ್ತು.

ಆದಾಗ್ಯೂ, ಮತ್ತೆ ಹೇಳಿಕೆ ನೀಡಿದ್ದ ಅಮೆರಿಕ, ನ್ಯಾಯಯುತ, ಪಾರದರ್ಶಕ, ಸಕಾಲಿಕ ಕಾನೂನು ಪ್ರಕ್ರಿಯೆಯನ್ನು ಬೆಂಬಲಿಸುವುದಾಗಿ ಪುನರುಚ್ಛರಿಸಿತ್ತು.

ಈ ನಡೆಯನ್ನು ಖಂಡಿಸಿರುವ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌, ದೇಶದ ಚುನಾವಣಾ ಪ್ರಕ್ರಿಯೆ ಕುರಿತ ಬಾಹ್ಯಾ ಆರೋಪಗಳು ಒಪ್ಪತಕ್ಕವಲ್ಲ. ದೇಶದ ಕಾನೂನಿನ ಅನುಸಾರ ಪ್ರಕ್ರಿಯೆ ನಡೆಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT