ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಸರ್ಗಿಯೊ ಗೋರ್ ಅವರು ಭಾರತಕ್ಕೆ ಅಮೆರಿಕದ ಮುಂದಿನ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಮಂಗಳವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಗೋರ್ (38) ಅವರ ಪರ 51 ಸೆನೆಟರ್ಗಳು ಮತ್ತು ವಿರುದ್ಧವಾಗಿ 47 ಸೆನೆಟರ್ಗಳು ಮತಚಲಾಯಿಸಿದ್ದಾರೆ. ಗೋರ್ ಅವರು ಸೇರಿದಂತೆ ರಾಯಭಾರಿ ಸ್ಥಾನಕ್ಕೆ 107 ಮಂದಿ ನಾಮನಿರ್ದೇಶನಗೊಂಡಿದ್ದರು.

ಪ್ರತಿಸುಂಕದ ವಿಚಾರವಾಗಿ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧ ಹದಗೆಟ್ಟಿರುವ ಸಂದರ್ಭದಲ್ಲಿ ಗೋರ್ ಅವರು ರಾಯಭಾರಿಯಾಗಿ ಆಯ್ಕೆಯಾಗಿರುವುದು ಗಮನಾರ್ಹ ಸಂಗತಿ.

ಶ್ವೇತಭವನ ಸಿಬ್ಬಂದಿ ಕಚೇರಿಯ ನಿರ್ದೇಶಕರಾಗಿರುವ ಗೋರ್ ಅವರನ್ನು ಭಾರತದ ರಾಯಭಾರಿ ಮತ್ತು ದಕ್ಷಿಣ ಮತ್ತು ಕೇಂದ್ರ ಏಷ್ಯಾದ ವ್ಯವಹಾರಗಳ ವಿಶೇಷ ರಾಯಭಾರಿಯಾಗಿ ಟ್ರಂಪ್ ಅವರು ಆಗಸ್ಟ್ನಲ್ಲಿ ನಾಮನಿರ್ದೇಶನ ಮಾಡಿದ್ದರು.

‘ಗೋರ್ ನನ್ನ ಆತ್ಮೀಯ ಮಿತ್ರ. ನನ್ನ ನಿಲುವುಗಳನ್ನು ಮತ್ತೊಂದು ದೇಶಕ್ಕೆ ಅರ್ಥಮಾಡಿಸಲು ಮತ್ತು ಅಮೆರಿಕವನ್ನು ಹೆಸರನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಸಮರ್ಥವಾಗಿರುವ ವ್ಯಕ್ತಿ ಎಂದು ನಾನು ನಂಬುವ ವ್ಯಕ್ತಿಗಳಲ್ಲಿ ಗೋರ್ ಕೂಡಾ ಒಬ್ಬರು’ ಎಂದು ಟ್ರಂಪ್ ಹೇಳಿದ್ದಾರೆ.

‘ಅಮೆರಿಕ –ಭಾರತ ನಡುವಿನ ವ್ಯಾಪಾರ ಒಪ್ಪಂದಗಳು ಅಮೆರಿಕದ ಸ್ಫರ್ಧಾತ್ಮಕತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಇತರ ದೇಶಗಳ ಮೇಲಿನ ಚೀನಾದ ಆರ್ಥಿಕ ಹತೋಟಿಯನ್ನು ಕಡಿಮೆಗೊಳಿಸುತ್ತದೆ’ ಎಂದು ಗೋರ್ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.