ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್ ಮತ್ತು ಅದರ ಕಟ್ಟಡಗಳನ್ನು ಒಳಗೊಂಡಿರುವ 'ಕ್ಯಾಪಿಟಲ್ ಹಿಲ್'ಗೆ ಸಮೀಪದಲ್ಲೇ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, 'ಬಾಹ್ಯ ಭದ್ರತಾ ಬೆದರಿಕೆ' ಹಿನ್ನೆಲೆಯಲ್ಲಿ ಅದನ್ನು ಸೋಮವಾರ ತಾತ್ಕಾಲಿಕವಾಗಿ ಲಾಕ್‌ಡೌನ್ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕ್ಯಾಪಿಟಲ್ ಸಂಕೀರ್ಣದ ಒಳಗಿನ ಕಟ್ಟಡಗಳನ್ನು 'ಬಾಹ್ಯ ಭದ್ರತಾ ಬೆದರಿಕೆ' ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಪ್ರವೇಶ ಅಥವಾ ನಿರ್ಗಮನಕ್ಕೆ ಅನುಮತಿ ಇಲ್ಲ. ಕಿಟಕಿಗಳು, ಬಾಗಿಲುಗಳಿಂದ ದೂರವಿರಿ. ಹೊರಗೆ ಉಳಿದಿದ್ದರೆ ಸುರಕ್ಷೆ ಪಡೆಯಿರಿ,' ಎಂದು ಕ್ಯಾಪಿಟಲ್ ಪೊಲೀಸರು ಸಂದೇಶ ರವಾನಿಸಿದ್ದರು. ಅಲ್ಲದೆ, ಭದ್ರತಾ ಬೆದರಿಕೆಯನ್ನು ತಿಳಿಸಿದ್ದರು.

ಲಾಕ್‌ಡೌನ್ ಅನ್ನು ಕೆಲ ಸಮಯದ ನಂತರ ತೆರವು ಮಾಡಲಾಯಿತು.

ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಾವಿರಾರು ಬೆಂಬಲಿಗರು ಜ.6ರಂದು ಕ್ಯಾಪಿಟಲ್‌ಗೆ ನುಗ್ಗಿ ಎಲೆಕ್ಟ್ರೊಲ್ ಕಾಲೇಜ್ ಮತ ಎಣಿಕೆಯಂಥ ಸಾಂವಿಧಾನಿಕ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದರು. ಇಂಥ ಘಟನೆ ಪುನರಾವರ್ತನೆಯಾಗುವುದನ್ನು ತಡೆಯಲು ಸುಮಾರು 25 ಸಾವಿರ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯನ್ನು ಕ್ಯಾಪಿಟಲ್‌ನ ಬಳಿ ನಿಯೋಜಿಸಲಾಗಿತ್ತು.

ಕ್ಯಾಪಿಟಲ್ ಮೇಲಿನ ದಾಳಿ, ಹಿಂಸಾಚಾರದಲ್ಲಿ ಐದು ಜನರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.