ಮಾಸ್ಕೊ: ಅಮೆರಿಕ ತಾನು ವಶಪಡಿಸಿಕೊಂಡಿರುವ ತೈಲ ಟ್ಯಾಂಕರ್ನಲ್ಲಿದ್ದ ಇಬ್ಬರು ರಷ್ಯಾ ಪ್ರಜೆಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ ಎಂದು ರಷ್ಯಾ ಶುಕ್ರವಾರ ತಿಳಿಸಿದೆ.

ರಷ್ಯಾದ ಧ್ವಜ ಹೊಂದಿದ್ದ ಮರಿನೆರಾ ಟ್ಯಾಂಕರ್(ಬೆಲ್ಲಾ–1) ಅನ್ನು ಅಮೆರಿಕ ಭದ್ರತಾ ಪಡೆಗಳು ಉತ್ತರ ಅಟ್ಲಾಂಟಿಕಾದಲ್ಲಿ ಬುಧವಾರ ವಶಪಡಿಸಿಕೊಂಡಿದ್ದವು. ಅದರಲ್ಲಿ 17 ಉಕ್ರೇನ್ ನಾಗರಿಕರು, ಜಾರ್ಜಿಯಾದ 6 ಮಂದಿ, ಮೂವರು ಭಾರತೀಯರು ಮತ್ತು ಇಬ್ಬರು ರಷ್ಯಾ ಪ್ರಜೆಗಳು ಇದ್ದರು.

‘ನಮ್ಮ ಮನವಿಗೆ ಸ್ಪಂದಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ಇಬ್ಬರು ಪ್ರಜೆಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ಸ್ವಾಗತಿಸುತ್ತೇವೆ ಮತ್ತು ಕೃತಜ್ಞತೆಯನ್ನು ತಿಳಿಸುತ್ತೇವೆ’ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ವಶಪಡಿಸಿಕೊಂಡಿರುವ ಟ್ಯಾಂಕರ್ನಲ್ಲಿದ್ದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುವುದಾಗಿ ಅಮೆರಿಕ ಹೇಳಿತ್ತು. ರಷ್ಯಾ ಅದನ್ನು ಖಂಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.