ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನ ಸ್ವೀಕರಿಸಿದ ಕಮಲಾ ಹ್ಯಾರಿಸ್

Published 23 ಆಗಸ್ಟ್ 2024, 4:53 IST
Last Updated 23 ಆಗಸ್ಟ್ 2024, 4:53 IST
ಅಕ್ಷರ ಗಾತ್ರ

ಷಿಕಾಗೊ: ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರು ನಾಮನಿರ್ದೇಶನ ಸ್ವೀಕರಿಸಿದರು.

ಷಿಕಾಗೊದಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಸೇರಿದ್ದ ಸಾವಿರಾರು ಜನರ ಉದ್ಘೋಷದೊಂದಿಗೆ, ನಾಮ ನಿರ್ದೇಶನ ಸ್ವೀಕರಿಸಿದ ಅವರು, ‘ಮುಂದಕ್ಕೆ ಹೊಸ ದಾರಿಯನ್ನು ರೂಪಿಸುತ್ತೇನೆ’ ಎಂದು ಹೇಳಿದರು.

‘ಜನರ, ‍ಪ್ರತಿ ಅಮೆರಿಕನ್ನರ, ಪಕ್ಷ, ಜನಾಂಗದ ಪರವಾಗಿ ನಾನು ಈ ನಾಮ ನಿರ್ದೇಶನವನ್ನು ಸ್ವೀಕರಿಸುತ್ತಿದ್ದೇನೆ’ ಎಂದು ಕಮಲಾ ಹ್ಯಾರಿಸ್ ಹೇಳಿದರು.

‘ನಮ್ಮ ಅತ್ಯುನ್ನತ ಆಕಾಂಕ್ಷೆಗಳ ಒಂದುಗೂಡಿಸುವ ಅಧ್ಯಕ್ಷೆಯಾಗುತ್ತೇನೆ. ‌ಭವಿಷ್ಯವು ಯಾವಾಗಲೂ ಹೋರಾಡಲು ಯೋಗ್ಯವಾಗಿದೆ. ಮತ್ತು ಅದು ಅಮೆರಿಕದ ಭವಿಷ್ಯಕ್ಕಾಗಿ ಮಾಡುವ ಹೋರಾಟವಾಗಿದೆ’ ಎಂದು ಹೇಳಿದರು.

‘ಪ್ರಿಯ ಅಮೆರಿಕನ್ನರೆ ನಾನು ನನ್ನ ದೇಶವನ್ನು ಹೃದಯದ ಅಂತರಾಳದಿಂದ ಪ‍್ರೀತಿಸುತ್ತೇನೆ. ರಾಷ್ಟ್ರವನ್ನು ನಿರ್ಮಿಸಿದ ನಿರ್ಭೀತ ನಂಬಿಕೆಯನ್ನು ನಾವು ಹಿಡಿದಿಟ್ಟುಕೊಳ್ಳುವ ಅಮೆರಿಕವನ್ನು ನಾನು ನೋಡುತ್ತೇನೆ. ಇದು ಇಡೀ ಜಗತ್ತಿಗೆ ಪ್ರೇರಣೆ. ಹೀಗಾಗಿಯೇ ನಮ್ಮ ದೇಶದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ನಮ್ಮ ಕೈಗೆ ಎಟುಕದ್ದು ಯಾವುದೂ ಇಲ್ಲ’ ಎಂದು ಹೇಳಿದರು.

(ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT