ವಾಷಿಂಗ್ಟನ್: ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನೊಂದಿಗೆ ಇತ್ತೀಚೆಗೆ ರಚಿಸಲಾದ ಇಂಡೋ-ಪೆಸಿಫಿಕ್‌ನ ‘ಔಕಸ್’(AUKUS)ಭದ್ರತಾ ಒಪ್ಪಂದ ಒಕ್ಕೂಟಕ್ಕೆ ಭಾರತ ಅಥವಾ ಜಪಾನ್ ದೇಶಗಳ ಸೇರ್ಪಡೆಯನ್ನು ಅಮೆರಿಕ ತಳ್ಳಿಹಾಕಿದೆ.

ಸೆಪ್ಟೆಂಬರ್ 15 ರಂದು, ಅಮೆರಿಕದ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತ್ರಿಪಕ್ಷೀಯ ಭದ್ರತಾ ಒಕ್ಕೂಟ ‘ಔಕಸ್’ ಅನ್ನು ಘೋಷಿಸಿದ್ದರು. ಇದರ ಅಡಿಯಲ್ಲಿ ಆಸ್ಟ್ರೇಲಿಯಾ, ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಪಡೆಯುತ್ತದೆ.

ಇದೇ 24ರಂದು ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಒಳಗೊಂಡ ಕ್ಬಾಡ್ ಶೃಂಗಸಭೆ ವಾಷಿಂಗ್ಟನ್‌ನಲ್ಲಿ ನಡೆಯುತ್ತಿದೆ. ಇದಕ್ಕಾಗಿ, ಪ್ರಧಾನಿ ನರೇಂದ್ರ ಮೋದಿ ಸಹ ತೆರಳಿದ್ದಾರೆ.

ಈ ಮಧ್ಯೆ, ಇಂದು ದೈನಂದಿನ ಪತ್ರಿಕಾಗೋಷ್ಠಿ ನಡೆಸಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರಿಗೆ ಪತ್ರಕರ್ತರೊಬ್ಬರು, ‘ಶುಕ್ರವಾರ ... ನೀವು ಆಸ್ಟ್ರೇಲಿಯಾ ಒಳಗೊಂಡ ಕ್ವಾಡ್ ಶೃಂಗಸಭೆ ನಡೆಸುತ್ತಿದ್ದೀರಿ. ಅದರಲ್ಲಿ ಭಾರತ ಮತ್ತು ಜಪಾನ್ ಸಹ ಇವೆ. ಅದೇ ರೀತಿ ಇಂಡೋ–ಪೆಸಿಫಿಕ್ ಭದ್ರತಾ ಪಾಲುದಾರಿಕೆ ಉದ್ದೇಶಕ್ಕೆ ಇತ್ತೀಚೆಗೆ ರಚಿಸಲಾದ ‘ಆಕಸ್‘ ಒಪ್ಪಂದದಲ್ಲೂ ಆಸ್ಟ್ರೇಲಿಯಾದ ಇದೆ. ಅದಕ್ಕೆ ಭಾರತ, ಜಪಾನ್ ದೇಶಗಳನ್ನು ಸೇರಿಸುತ್ತೀರಾ ಎಂದು ಪ್ರಶ್ನೆ ಎತ್ತಿದರು.

ಅದಕ್ಕೆ, ‘ಔಕಸ್’? ಜಾಕಸ್? ಜೈಕೌಸ್? ಎಂದು ಜಾನ್ ಸಾಕಿ ಹಗುರವಾಗಿ ಉತ್ತರಿಸಿದ್ದಾರೆ.

ಇದೇವೇಳೆ, ಫ್ರಾನ್ಸ್ ದೇಶವನ್ನೂ ಈ ಒಪ್ಪಂದದಿಂದ ಹೊರಗಿಡಲಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಎಲ್ಲರೂ ಒಂದೇ ರೀತಿಯ ಭದ್ರತಾ ಸವಾಲು ಎದುರಿಸುತ್ತಿರುವಾಗ ತಮ್ಮನ್ನು ಹೊರಗಿಟ್ಟ ಬಗ್ಗೆ ಫ್ರಾನ್ಸ್ ಆಕ್ಷೇಪ ಎತ್ತಿದೆ.

ಇದಕ್ಕೆ ಉತ್ತರಿಸಿದ ಅವರು, ‘ಕಳೆದ ವಾರ ಘೋಷಣೆಯಾದ ಆಕಸ್‌ಗೆ ಅವರನ್ನು ಸೇರಿಸುವ ಯಾವುದೇ ಸೂಚನೆ ಕೊಟ್ಟಿರಲಿಲ್ಲ. ಅದು ಮ್ಯಾಕ್ರನ್‌ಗೆ ಕಳುಹಿಸಿದ ಸಂದೇಶ ಎಂದು ನಾನು ಭಾವಿಸುತ್ತೇನೆ. ಭಾರತವು ಸೇರಿದಂತೆ ಬೇರೆ ಯಾವುದೇ ದೇಶವನ್ನು ಇದರಲ್ಲಿ ಸೇರಿಸಿಕೊಳ್ಳುವುದಿಲ್ಲ’ಎಂದು ಅವರು ಹೇಳಿದ್ದಾರೆ.

ತ್ರಿಪಕ್ಷೀಯ ಭದ್ರತಾ ಮೈತ್ರಿಯು ಇಂಡೋ-ಪೆಸಿಫಿಕ್‌ನಲ್ಲಿ ಚೀನಾವನ್ನು ಎದುರಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಇದು ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳು ಮೊದಲ ಬಾರಿಗೆ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನು ಆಸ್ಟ್ರೇಲಿಯಾಕ್ಕೆ ನೀಡಲು ಅನುವು ಮಾಡಿಕೊಡುತ್ತದೆ.

ತ್ರಿಪಕ್ಷೀಯ ಮೈತ್ರಿಯನ್ನು ಚೀನಾ ಕಟುವಾಗಿ ಟೀಕಿಸಿದ್ದು, ಅಂತಹ ಗುಂಪುಗಾರಿಕೆಗೆ ಭವಿಷ್ಯವಿಲ್ಲ. ಪ್ರಾದೇಶಿಕ ಸ್ಥಿರತೆಯನ್ನು ತೀವ್ರವಾಗಿ ಹಾಳು ಮಾಡುತ್ತದೆ ಮತ್ತು ಶಸ್ತ್ರಾಸ್ತ್ರ ಸ್ಪರ್ಧೆಯನ್ನು ಉಲ್ಬಣಗೊಳಿಸುತ್ತದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.