ವಾಷಿಂಗ್ಟನ್: ಅಮೆರಿಕದ 3000 ಅಮಾಯಕ ಜನರ ಸಾವಿಗೆ ಕಾರಣವಾದ2001ರ ಸೆ.11ರ ದಾಳಿಯ ಪ್ರಕರಣದ ಎಫ್‌ಬಿಐ ತನಿಖೆಯ ದಾಖಲೆಗಳನ್ನು ಅಧ್ಯಕ್ಷ ಜೋ ಬೈಡನ್ ಅವರ ಆಡಳಿತ ನೀಡಿದ ಗಡುವಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇಲ್ಲ ಎಂಬುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಒಪ್ಪಿಕೊಂಡಿದೆ.

2002ರ ಸೆಪ್ಟೆಂಬರ್ 11ರಂದು ನಡೆದ ದಾಳಿಯ ಕುರಿತಾಗಿ ಎಫ್‌ಬಿಐ ತನಿಖೆಯ ದಾಖಲೆಗಳನ್ನು ಪರಿಶೀಲಿಸಿ, 6 ತಿಂಗಳ ಒಳಗಾಗಿ ಸಾರ್ವಜನಿಕಗೊಳಿಸಬೇಕು ಎಂದುಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಬೈಡನ್ ಅವರ ಸರ್ಕಾರ ನ್ಯಾಯಾಂಗ ಇಲಾಖೆಗೆ ಆದೇಶ ನೀಡಿತ್ತು.

ಮಾರ್ಚ್ ಮಧ್ಯಂತರ ಅವಧಿಯಲ್ಲಿ ಬಹುತೇಕ ದಾಖಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಉಳಿದ ಎಲ್ಲಾ ದಾಖಲೆಗಳನ್ನು ಏಪ್ರಿಲ್ ಮಧ್ಯಂತರ ಅವಧಿಯಲ್ಲಿ ಸಾರ್ವಜನಿಕಗೊಳಿಸಲಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಈ ದಾಳಿಗೆ ಸೌದಿ ಅರೇಬಿಯಾದ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಎಫ್‌ಬಿಐ ತನ್ನ ವರದಿಯಲ್ಲಿ ಒತ್ತಿ ಹೇಳಿದೆ ಎನ್ನಲಾಗಿದೆ. ಅಲ್ಲದೆ ಈ ಕೃತ್ಯದಲ್ಲಿ ಭಾಗಿಯಾಗಿದ್ದ 18 ಅಪಹರಣಕಾರರ ಪೈಕಿ 15 ಮಂದಿ ಸೌದಿ ಅರೇಬಿಯಾದವರು ಎನ್ನಲಾಗಿದೆ.

ಅಲ್‌ಕೈದಾ ಉಗ್ರರು ಎಸಗಿದ್ದ ಈ ದಾಳಿಯು9/11 ಎಂದೇ ಕುಖ್ಯಾತಿಯಾಗಿದೆ. ದಾಳಿಯಲ್ಲಿ ಸುಮಾರು 3 ಸಾವಿರ ಮಂದಿ ಸಾವನ್ನಪ್ಪಿ, 20 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.