ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವಳಿ ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್‌; ಗುಡುಗು, ಮಿಂಚು ಎಂದು ಹೆಸರು!

ಅಕ್ಷರ ಗಾತ್ರ

ಬೆಂಗಳೂರು: ಜಗತ್ತಿನ ವೇಗದ ಓಟಗಾರ, ಓಲಿಂಪಿಕ್‌ನಲ್ಲಿ 8 ಚಿನ್ನದ ಪದಕಗಳನ್ನು ಗೆದ್ದು ವಿಶ್ವದಾಖಲೆ ಮಾಡಿರುವ ಜಮೈಕಾದ ಉಸೇನ್ ಬೋಲ್ಟ್‌ ಅವರು ಅವಳಿ ಗಂಡು ಮಕ್ಕಳಿಗೆ ತಂದೆಯಾಗಿದ್ದಾರೆ.

ತಂದೆಯರ ದಿನಾಚರಣೆ ಪ್ರಯುಕ್ತ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಚಾರ ಹಂಚಿಕೊಂಡಿರುವ ಅವರು ಹಾಗೂ ಅವರ ಪತ್ನಿ ಕಾಸಿ ಬೆನ್ನೆಟ್, ಮುದ್ದಾದ ಅವಳಿ ಮಕ್ಕಳಿಗೆ ಆಕರ್ಷಕ ಹೆಸರು ಇಟ್ಟಿದ್ದಾರೆ.

ಒಂದು ಮಗುವಿಗೆ ಥಂಡರ್ ಬೋಲ್ಟ್ ಇನ್ನೊಂದು ಮಗುವಿಗೆ ಸೇಂಟ್ ಲಿಯೋ ಬೋಲ್ಟ್‌ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೇ ಕಾಸಿ ಅವರು ಉಸೇನ್ ಅವರಿಗೆ ತಂದೆಯ ದಿನಾಚರಣೆ ಶುಭಾಶಯಗಳನ್ನು ತಿಳಿಸಿದ್ದಾರೆ.

ಈಗಾಗಲೇ ಈ ದಂಪತಿಗೆ 2019 ರಲ್ಲಿ ಹೆಣ್ಣು ಮಗು ಜನನವಾಗಿತ್ತು. ಆ ಮಗುವಿಗೆ ಓಲಿಂಪಿಯಾ ಲೈಟ್ನಿಂಗ್ ಎಂದು ಹೆಸರಿಡಲಾಗಿತ್ತು. ಮಕ್ಕಳಿಗೆ ಗುಡುಗು, ಮಿಂಚು ಎಂದು ಹೆಸರಿಟ್ಟಿರುವ ಉಸೇನ್‌ ಬೋಲ್ಟ್‌ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT