ಮಾಸ್ಕೊ(ರಷ್ಯಾ): ಪಾಶ್ಚಿಮಾತ್ಯ ರಾಷ್ಟ್ರಗಳಿಂದ ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳ ತಾಲೀಮು ನಡೆಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇನೆಗೆ ಆದೇಶಿಸಿದ್ದಾರೆ.

2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದ ಬಳಿಕ ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ಸೆಟೆದು ನಿಂತಿವೆ. ಈ ಹಿನ್ನೆಲೆಯಲ್ಲಿ ಮುಂಬರುವ ಅಪಾಯ ಅರಿತು ಅಣ್ವಸ್ತ್ರ ಬಳಕೆಯ ಎಚ್ಚರಿಕೆಯನ್ನು ಪಾಶ್ಚಿಮಾತ್ಯ ದೇಶಗಳಿಗೆ ಪುಟಿನ್ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಕಾರ್ಯತಂತ್ರವಲ್ಲದ ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡ ಸಿದ್ಧತೆಗಳು ಮತ್ತು ಶಸ್ತ್ರಾಸ್ತ್ರ ನಿಯೋಜನೆಯನ್ನು ಈ ತಾಲೀಮು ಒಳಗೊಂಡಿದೆ.

ಯುದ್ಧತಂತ್ರದ ಪರಮಾಣು ಶಸ್ತ್ರಾಸ್ತ್ರಗಳು, ಯುದ್ಧಭೂಮಿಯ ಬಳಕೆಗಾಗಿ ವಿನ್ಯಾಸಗೊಳಿಸಲಾದ ಅಣ್ವಸ್ತ್ರಗಳ ಪ್ರಯೋಗ ಈ ತಾಲೀಮಿನಲ್ಲಿದೆ ಎಂದು ಸಿಎನ್‌ಎನ್ ವರದಿ ಮಾಡಿವೆ.

ಪಾಶ್ಚಿಮಾತ್ಯ ದೇಶಗಳ ಪ್ರಚೋದನಕಾರಿ ಹೇಳಿಕೆಗಳು ಮತ್ತು ಬೆದರಿಕೆಗಳು ಈ ಸಮರಾಭ್ಯಾಸಕ್ಕೆ ಪ್ರೇರಣೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಉಕ್ರೇನ್‌ನಲ್ಲಿ ಪಾಶ್ಚಿಮಾತ್ಯ ಸೇನೆ ಜಮಾವಣೆ ಮಾಡುವ ಮೂಲಕ ರಷ್ಯಾ ದಾಳಿಗೆ ಉತ್ತರ ಕೊಡುವ ಬಗ್ಗೆ ಪ್ರಸ್ತಾಪಿಸಿದ್ದರು. ಅಲ್ಲದೆ, ರಷ್ಯಾದಿಂದ ಯೂರೋಪ್ ಭದ್ರತೆಗೆ ಧಕ್ಕೆ ಬಂದಿದೆ ಎಂದು ಗುಡುಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.