ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ ಬಳಿಕ, ಹಲವು ಹಿಂದೂ ದೇಗುಲಗಳು ಹಾಗೂ ವ್ಯಾಪಾರ ಕಟ್ಟಡಗಳನ್ನು ಧ್ವಂಸ ಮಾಡಲಾಗಿತ್ತು. ಹಸೀನಾ ಅವರ ಅವಾಮಿ ಲೀಗ್‌ನ ಎರಡು ಹಿಂದೂ ನಾಯಕರನ್ನು ಹತ್ಯೆ ಮಾಡಲಾಗಿತ್ತು.
ಹಸೀನಾ ಅವರ ಪಲಾಯನದ ಬಳಿಕ, ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯದ ಹೆಚ್ಚಳವಾಗುತ್ತಿದೆ. ಖ್ಯಾತ ಗಾಯಕ ರಾಹುಲ್ ಅನಂದ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು.