ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಯುದ್ಧ ನೌಕೆ ಮೇಲೆ ಯೆಮನ್‌ನ ಹುತಿ ಬಂಡುಕೋರರಿಂದ ಕ್ಷಿಪಣಿ ದಾಳಿ

Published 15 ಜನವರಿ 2024, 13:24 IST
Last Updated 15 ಜನವರಿ 2024, 13:24 IST
ಅಕ್ಷರ ಗಾತ್ರ

ದುಬೈ: ಅಮೆರಿಕದ ಯುದ್ಧ ನೌಕೆಯನ್ನು ಗುರಿಯಾಗಿಸಿ ಯೆಮನ್‌ನ ಹುತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ.

‘ಕೆಂಪು ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಯುಎಸ್‌ಎಸ್‌ ಲಬೂನ್‌ ನೌಕೆಯನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಹೌತಿಗಳ ವಶದಲ್ಲಿರುವ ಬಂದರು ನಗರ ಹೊಡೆಯ್ಡಾದಿಂದ ಈ ಕ್ಷಿಪಣಿಯನ್ನು ಹಾರಿಸಲಾಗಿದೆ’ ಎಂದು ಅಮೆರಿಕ ಮಿಲಿಟರಿಯ ಸೆಂಟ್ರಲ್‌ ಕಮಾಂಡ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಆದರೆ, ಹೌತಿ ಬಂಡುಕೋರರು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

‘ಆದರೆ, ಕ್ಷಿಪಣಿಯನ್ನು ಅಮೆರಿಕ ಯುದ್ಧ ವಿಮಾನ ಹೊಡೆದುರುಳಿಸಿದೆ. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ. ಯಾರಿಗೂ ಗಾಯವಾಗಿಲ್ಲ’ ಎಂದು ಅಮೆರಿಕ ಮಿಲಿಟರಿಯ ಸೆಂಟ್ರಲ್‌ ಕಮಾಂಡ್‌ ಮಾಹಿತಿ ನೀಡಿದೆ.

ಕೆಲವು ವಾರಗಳ ಹಿಂದೆ ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ನಡೆಸಿದ್ದ ದಾಳಿಗೆ ಪ್ರತಿಯಾಗಿ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಹೌತಿ ಬಂಡುಕೋರರ ಮೇಲೆ ಶುಕ್ರವಾರ ದಾಳಿ ನಡೆಸಿದ್ದವು. ಇದರ ಬೆನ್ನಲ್ಲೇ ಅಮೆರಿಕಕ್ಕೆ ಸೇರಿದ ಹಡಗಿನ ಮೇಲೆ ದಾಳಿ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT