ಕೈರೊ: ಯೆಮೆನ್ನಲ್ಲಿ ಸುಮಾರು 150 ಜನರು ಇದ್ದ ದೋಣಿ ಮುಳುಗಿ ಕನಿಷ್ಠ 68 ವಲಸಿಗರು ಮೃತಪಟ್ಟಿದ್ದು, 74 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಯೆಮೆನ್ನ ದಕ್ಷಿಣ ಅಬ್ಯಾನ್ ಪ್ರಾಂತ್ಯದ ಕರಾವಳಿ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಈವರೆಗೆ 10 ಮಂದಿಯನ್ನು ರಕ್ಷಿಸಲಾಗಿದೆ.

ಕಡುಬಡತನದ ಆಫ್ರಿಕಾದಿಂದ ಪಲಾಯನಗೈದ ನೂರಾರು ವಲಸಿಗರು ಕೆಲಸದ ನಿಟ್ಟಿನಲ್ಲಿ ಶ್ರೀಮಂತ ಗಲ್ಫ್ ಅರಬ್ ರಾಷ್ಟ್ರಗಳನ್ನು ತಲುಪುವ ಇರಾದೆ ಹೊಂದಿದ್ದರು.

ಯೆಮೆನ್ಗೆ ಅನಧಿಕೃತ ವಲಸಿಗರ ಹರಿವು ಗಣನೀಯವಾಗಿ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಘಟನೆ (ಐಒಎಂ) ಹೇಳಿದೆ.

ಆಫ್ರಿಕಾದಿಂದ ಯೆಮೆನ್ಗೆ ಹೋಗುವ ಮಾರ್ಗ, ವಿಶ್ವದ ಅತ್ಯಂತ ನಿಬಿಡ ಹಾಗೂ ಅತ್ಯಂತ ಅಪಾಯಕಾರಿ ವಲಸೆ ಮಾರ್ಗಗಳಲ್ಲಿ ಒಂದಾಗಿದೆ. ಕಳೆದ ವರ್ಷ ಯೆಮೆನ್ಗೆ 60 ಸಾವಿರಕ್ಕೂ ಹೆಚ್ಚು ಮಂದಿ ವಲಸೆ ಹೋಗಿದ್ದರು ಎಂದು ಐಒಎಂ ತಿಳಿಸಿದೆ.
.ಯೆಮೆನ್ | ಕೇರಳದ ನರ್ಸ್ಗೆ ಮರಣದಂಡನೆ ಶಿಕ್ಷೆ; ಸಾಧ್ಯವಿರುವ ಎಲ್ಲ ನೆರವು: ಕೇಂದ್ರ.ಹುತಿ ಗುರಿಯಾಗಿಸಿ ಯೆಮೆನ್ ತೈಲ ಸಂಗ್ರಹಾಗಾರಕ್ಕೆ ಅಮೆರಿಕ ದಾಳಿ; 20 ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.