ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ವೈಮಾನಿಕ ದಾಳಿ: ಐದು ಮಂದಿ ಸಾವು

Published 12 ಜನವರಿ 2024, 14:05 IST
Last Updated 12 ಜನವರಿ 2024, 14:05 IST
ಅಕ್ಷರ ಗಾತ್ರ

ದುಬೈ: ಯೆಮೆನ್ ಅನ್ನು ಗುರಿಯಾಗಿಸಿಕೊಂಡು ಅಮೆರಿಕ ನೇತೃತ್ವದಲ್ಲಿ ನಡೆಸಲಾದ ವೈಮಾನಿಕ ದಾಳಿಯಲ್ಲಿ ಕನಿಷ್ಠ 5 ಮಂದಿ ಸಾವಿಗೀಡಾಗಿದ್ದು, 6 ಮಂದಿ ಗಾಯಗೊಂಡಿದ್ದಾರೆ ಎಂದು ಹೌತಿ ಬಂಡುಕೋರರ ಮಿಲಿಟರಿ ವಕ್ತಾರ ಶುಕ್ರವಾರ ಹೇಳಿದ್ದಾರೆ. 

ಬ್ರಿಗೇಡಿಯರ್ ಜನರಲ್ ಯಾಹ್ಯಾ ಸ್ಯಾರಿ ಈ ಸಂಬಂಧ ವಿಡಿಯೊ ಹೇಳಿಕೆ ನೀಡಿದ್ದಾರೆ.

ಯೆಮೆನ್ ಜನರ ವಿರುದ್ಧದ ತಮ್ಮ ಆಕ್ರಮಣಶೀಲತೆಯ ಸಂಪೂರ್ಣ ಜವಾಬ್ದಾರಿಯನ್ನು ಅಮೆರಿಕ ಮತ್ತು ಬ್ರಿಟನ್ ವೈರಿಗಳು ಹೊರಬೇಕಾಗುತ್ತದೆ. ಅದಕ್ಕಾಗಿ ಅವರು ಉತ್ತರ ನೀಡಬೇಕಾಗುತ್ತದೆ ಮತ್ತು ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ ಎಂದು ಸ್ಯಾರಿ ಹೇಳಿದ್ದಾರೆ.

ಹೌತಿಗಳ ಹತೋಟಿಯಲ್ಲಿರುವ ಯೆಮೆನ್‌ನ ಐದು ಪ್ರದೇಶಗಳಲ್ಲಿ 73 ದಾಳಿಗಳು ನಡೆದಿವೆ ಎಂದು ಅವರು ಹೇಳಿದ್ದಾರೆ. ಆದರೆ, ಅಮೆರಿಕ ನೇತೃತ್ವದ ದಾಳಿಗಳ ಗುರಿ ಏನಾಗಿತ್ತು ಎನ್ನುವುದರ ಬಗ್ಗೆ ಅವರು ಹೆಚ್ಚು ಮಾತಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT