ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲೂ ಯೋಗ ತರಗತಿ ಆರಂಭ: ಇಸ್ಲಾಮಾಬಾದ್‌ ಮಹಾನಗರ ಪಾಲಿಕೆಯಿಂದ ಆಯೋಜನೆ

Published 4 ಮೇ 2024, 12:16 IST
Last Updated 4 ಮೇ 2024, 12:16 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಭಾರತ ಮೂಲದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸ ‘ಯೋಗ’ ನೆರೆಯ ಪಾಕಿಸ್ತಾನಕ್ಕೂ ಅಧಿಕೃತವಾಗಿ ಕಾಲಿಟ್ಟಿದೆ.

ಇಸ್ಲಾಮಾಬಾದ್‌ ಉಸ್ತುವಾರಿ ಹೊಣೆ ಹೊತ್ತಿರುವ ರಾಜಧಾನಿ ಅಭಿವೃದ್ಧಿ ಮಂಡಳಿಯು (ಸಿಡಿಎ) ತನ್ನ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ, ‘ಇಸ್ಲಾಮಾಬಾದ್‌ ಮಹಾನಗರ ಪಾಲಿಕೆಯು ಎಫ್‌–9 ಪಾರ್ಕ್‌ನಲ್ಲಿ ಉಚಿತ ಯೋಗ ತರಗತಿ ಆರಂಭಿಸಿದೆ’ ಎಂದು ತಿಳಿಸಿದೆ.

ಹಲವರು ಈಗಾಗಲೇ ತರಗತಿಗೆ ಸೇರ್ಪಡೆಯಾಗಿದ್ದಾರೆ ಎಂದು ಸಿಡಿಎ ತಿಳಿಸಿದೆ. ಜೊತೆಗೆ ಜನರು ಯೋಗಾಭ್ಯಾಸ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದೆ.

ವಿಶ್ವಸಂಸ್ಥೆಯು 2014 ಡಿಸೆಂಬರ್‌ 11ರಂದು ಭಾರತ ಮೂಲದ ಯೋಗಕ್ಕೆ ಜಾಗತಿಕ ಮನ್ನಣೆ ನೀಡಿ ಜೂನ್‌ 21 ಅನ್ನು ‘ಅಂತರರಾಷ್ಟ್ರೀಯ ಯೋಗ ದಿನ’ವೆಂದು ಘೋಷಿಸಿತು. ಈ ಕುರಿತ ಪ್ರಸ್ತಾವಕ್ಕೆ 175 ರಾಷ್ಟ್ರಗಳು ಅಂದು ಸಹಿ ಹಾಕಿದ್ದವು.

ಪಾಕಿಸ್ತಾನದಲ್ಲಿ ಯೋಗವು ಔಪಚಾರಿಕವಾಗಿ ಮಾತ್ರ ಬಳಕೆಯಲ್ಲಿತ್ತು. ಸದ್ಯ ಯೋಗಾಭ್ಯಾಸಕ್ಕೆ ಅಧಿಕೃತ ಮಾನ್ಯತೆ ಸಿಕ್ಕಂತಾಗಿದೆ.

ಉಚಿತ ಯೋಗ ತರಬೇತಿ ನೀಡುವ ಕ್ರಮವನ್ನು ಹಲವು ಶ್ಲಾಘಿಸಿದ್ದಾರೆ.  ಆದರೆ ಮತ್ತೆ ಕೆಲವರು ಸಿಡಿಎಯ ಕ್ರಮವನ್ನು ಟೀಕಿಸಿದ್ದಾರೆ. ‘ಇಸ್ಲಾಮಾಬಾದ್‌ ನಿವಾಸಿಗಳಿಗೆ ಅಗತ್ಯ ಸೌಕರ್ಯ ಒದಗಿಸುವ ಬದಲಿಗೆ ಇಂಥ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT