ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ವಿಮಾನ ನೀಡಲು ಒಪ್ಪಿಗೆ: ಡೆನ್ಮಾರ್ಕ್‌ಗೆ ಕೃತಜ್ಞತೆ ಸಲ್ಲಿಸಿದ ಝೆಲೆನ್‌ಸ್ಕಿ

Published 21 ಆಗಸ್ಟ್ 2023, 14:51 IST
Last Updated 21 ಆಗಸ್ಟ್ 2023, 14:51 IST
ಅಕ್ಷರ ಗಾತ್ರ

ಕೋಪನ್‌ಹೇಗನ್‌: ರಷ್ಯಾದ ಅತಿಕ್ರಮಣವನ್ನು ಎದುರಿಸಲು ಅಮೆರಿಕ ನಿರ್ಮಿತ ಎಫ್‌–16 ಯುದ್ಧ ವಿಮಾನಗಳನ್ನು ನೀಡಲು ಒಪ್ಪಿಗೆ ಸೂಚಿಸಿರುವುದಕ್ಕೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಡೆನ್ಮಾರ್ಕ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಉಕ್ರೇನ್‌ ಮೇಲಿನ ರಷ್ಯಾದ ಅತಿಕ್ರಮಣವು ಯಶಸ್ವಿಯಾದರೆ ಯೂರೋಪ್‌ನ ಇತರ ಪ್ರದೇಶಗಳಿಗೂ ಭೀತಿ ಎದುರಾಗಬಹುದು ಎಂದು ಝೆಲೆನ್‌ಸ್ಕಿ ಪ್ರತಿಪಾದಿಸಿದ್ದಾರೆ.

ಎಫ್‌–16 ಯುದ್ಧ ವಿಮಾನಗಳನ್ನು ನೀಡುವಂತೆ ಉಕ್ರೇನ್‌ ತನ್ನ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳಿಗೆ ಒತ್ತಾಯಿಸಿತ್ತು. ಈ ವರ್ಷಾಂತ್ಯಕ್ಕೆ ಉಕ್ರೇನ್‌ಗೆ ಎಫ್‌–16 ಯುದ್ಧ ವಿಮಾನಗಳನ್ನು ನೀಡಲಾಗುವುದು ಎಂದು ಡೆನ್ಮಾರ್ಕ್‌ ಮತ್ತು ನೆದರ್ಲೆಂಡ್‌ ಈಚೆಗೆ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT