ನ್ಯೂಯಾರ್ಕ್ (ಪಿಟಿಐ): ಮಾಹಿತಿ ಸೋರಿಕೆ ಆರೋಪದ ಮೇಲೆ ಬಂಧಿಸಲಟ್ಟ ಗೋಲ್ಡ್‌ಮನ್ ಸ್ಯಾಚೆ ಕಂಪೆನಿ ಮಾಜಿ ನಿರ್ದೇಶಕ ರಜತ್ ಗುಪ್ತ ಅವರನ್ನು ಹತ್ತು ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಮುಚ್ಚಳಿಕೆಯೊಂದಿಗೆ ಗುರುವಾರ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ.

ಆರೋಪ ಸಾಬೀತಾದರೆ ಗುಪ್ತ 105 ವರ್ಷಗಳ ಜೈಲು ಶಿಕ್ಷೆಗೆ ಒಳಪಡಬೇಕಾಗುತ್ತದೆ. ನ್ಯಾಯಾಲಯದಲ್ಲಿ ತಾನು ನಿರ್ದೋಷಿ ಎಂದು ರಜತ್ ಗುಪ್ತ ಹೇಳಿಕೊಂಡ ಕಾರಣ ಅವರಿಗೆ ಜಾಮೀನು ಜಾಮೀನು ನೀಡಲಾಗಿದೆ.

ಗೋಲ್ಡ್‌ಮನ್ ಸ್ಯಾಚೆಯಲ್ಲಿನ ಬಂಡವಾಳ ಕುರಿತಂತೆ ರಹಸ್ಯ ಮಾಹಿತಿಯನ್ನು ತನ್ನ ಸ್ನೇಹಿತ ಶ್ರೀಲಂಕಾದ ರಾಜ್ ರಾಜರತ್ನಂ ಅವರಿಗೆ ನೀಡಿದ ಆರೋಪದ ಮೇಲೆ ಗುಪ್ತ ಅವರನ್ನು ಬಂಧಿಸಲಾಗಿತ್ತು.

ಬುಧವಾರ ಗುಪ್ತ ಅವರು ಮ್ಯಾನ್‌ಹಟನ್‌ನಲ್ಲಿನ ಎಫ್‌ಬಿಐ ಕಚೇರಿಯಲ್ಲಿ ಹಾಜರಾಗಿದ್ದರು. ಒಂದು ವೇಳೆ ಆರೋಪ ಸಾಬೀತಾದಲ್ಲಿ ಗುಪ್ತ 25 ಮಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚು ಮೊತ್ತವನ್ನು ದಂಡವಾಗಿ ತೆರಬೇಕಾಗುತ್ತದೆ.
ಜತೆಗೆ ಸಂಚಿನ ಆರೋಪದ ಮೇಲೆ ಗುಪ್ತ ಗರಿಷ್ಠ 250,000 ಅಮೆರಿಕನ್ ಡಾಲರ್ ಮೊತ್ತವನ್ನು ದಂಡವಾಗಿ ತೆರಬೇಕಾದೀತು, ಇಲ್ಲವೇ ತಾನು ಮಾಡಿದ ಅಪರಾಧದಿಂದ ಉಂಟಾದ ಲಾಭ ಅಥವಾ ನಷ್ಟದ ದುಪ್ಪಟ್ಟು ಮೊತ್ತವನ್ನು ದಂಡವಾಗಿ ತೆರಬೇಕಾದೀತು ಎನ್ನಲಾಗಿದೆ. ಗುಪ್ತ ಅವರ ಮುಂದಿನ ವಿಚಾರಣೆ 2012 ಎಪ್ರಿಲ್ 9ಕ್ಕೆ ನಡೆಯಲಿದೆ.

ಶರಣಾಗತಿಗೂ `ನಂಬಿಕೆ~
ಈ ಬಾರಿಯ ದೀಪಾವಳಿ ರಜತ್ ಗುಪ್ತಗೆ ಕತ್ತಲ ಹಬ್ಬವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬೆಳಕಿನ ಹಬ್ಬದಂದು ನ್ಯಾಯಾಲಯಕ್ಕೆ ಶರಣಾದಲ್ಲಿ ದೇವರು ತನ್ನನ್ನು ಕಾಪಾಡಬಹುದು ಎಂಬ ನಂಬಿಕೆಯಿಂದ ಗುಪ್ತ ಅಂದು ನ್ಯಾಯಾಲಯಕ್ಕೆ ಹಾಜರಾದರು ಎನ್ನಲಾಗಿದೆ.

`ದೀಪಾವಳಿಯ ಶುಭ ದಿನದಂದು ಹಾಜರಾಗುವುದರಿಂದ ಒಳ್ಳೆಯದಾಗುತ್ತದೆ ಎಂದು ಗುಪ್ತ ನಂಬಿದ್ದಾರೆ~ ಎಂದು ಅವರ ಬಾಲ್ಯ ಸ್ನೇಹಿತ ಆನಂದ್ ಜುಲ್ಕಾ ಅವರನ್ನು ಉಲ್ಲೇಖಿಸಿ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.