ಪುರುಷ ಪ್ರಧಾನ ವ್ಯವಸ್ಥೆಯ ರಚನೆಯಲ್ಲಿ ಲೇಖಕಿಯರ ಬರಹಗಳಿಗೆ ವಸ್ತುವಿನ ಆಯ್ಕೆಯ ಮಿತಿಗಳು ಇರುವುದು ಸಹಜವಾದ ಸಂಗತಿ. ಅದು ಅಂದಿಗೂ ಇಂದಿಗೂ ಸತ್ಯ. ಉರ್ದು ಮಹಿಳಾ ಲೇಖಕಿಯರು ಕೂಡ ಇದಕ್ಕೆ ಹೊರತೇನಲ್ಲ. ಆಕ್ರಮಣ, ಬಹಿಷ್ಕಾರದಂಥಹ ಪ್ರತಿಕ್ರಿಯೆಗಳು ಸರ್ವೇಸಾಮಾನ್ಯ. ಈ ಹಿನ್ನೆಲೆಯಲ್ಲಿ 1940ರ ದಶಕದಲ್ಲಿ ಬದುಕಿನ ಸವಾಲುಗಳನ್ನು ಸ್ವೀಕರಿಸುತ್ತಲೇ ಆ ಸವಾಲುಗಳನ್ನು ಸೃಜನಶೀಲ ಬರಹಗಳಲ್ಲಿ ಕಲಾತ್ಮಕವಾಗಿ ಅಭಿವ್ಯಕ್ತಿಸಿ ಹೊಸ ಸಾಹಿತ್ಯ ಮಾದರಿಯ ಚರಿತ್ರೆ ಹುಟ್ಟು ಹಾಕಿದ ಲೇಖಕಿ ಇಸ್ಮತ್ ಚುಗ್ತಾಯಿ.

ಚುಗ್ತಾಯಿ ಅವರ ಬರಹಗಳಲ್ಲಿ ವಿಶೇಷತೆ ಎಂದರೆ ಹೆಣ್ಣಿನ ದೇಹವೇ ನುಡಿಯುವಂತೆ ಮಾಡಿದ್ದು. ಆ ಮೂಲಕ ಸಾಹಿತ್ಯದ ಆರೋಗ್ಯಕರ ಬೆಳವಣಿಗೆಗೆ ಶಕ್ತಿಯನ್ನು ತುಂಬಿದರು. ಇದು ಉರ್ದು ಸಾಹಿತ್ಯ ಲೋಕಕ್ಕೆ ಅಪೂರ್ವ ಕಾಣಿಕೆ.

ಬದುಕನ್ನು ಅತ್ಯಂತ ಕಾಳಜಿಯಿಂದ ಹಿಡಿದಿಟ್ಟ ಲೇಖಕಿಯ ಬರವಣಿಗೆಯನ್ನು ಇಸ್ಮ್ತ್ (ಸ್ತ್ರೀ) ಎಂದೇ ಪರಿಗಣಿಸಲಾಗುತ್ತಿತ್ತು. ಸ್ವತಃ ಇಸ್ಮತ್ ತನ್ನ ಬರಹಗಳನ್ನು ಕುರಿತು `ಎಲ್ಲರೂ ನನ್ನನ್ನು ಉರ್ದು ಸಾಹಿತ್ಯದ `ವ್ಯಾಂಪ್~ ಎನ್ನುತ್ತಾರೆ. ಆದರೆ ನಾನು ಸಾಹಿತ್ಯ ರಚನೆಯ ನಿಟ್ಟಿನಲ್ಲಿ ಅನುಭವಿಸಿದ ಕಷ್ಟ, ಸಂಕಟವನ್ನು ಯಾರು ಅನುಭವಿಸಿದ್ದಾರೆ~ ಎಂದು ಕೇಳುತ್ತಾರೆ.

1944ರಲ್ಲಿ ``ಲಿಹಾಫ್(ಹೊದಿಕೆ) ಕಥೆಯನ್ನು ಪ್ರಕಟಿಸಿರುವ ಇಸ್ಮತ್ ಲಿಹಾಫ್ನಲ್ಲಿ ಬೇಗಂಜಾನ್ ಎಂಬ ಹೆಣ್ಣುಮಗಳು ತನ್ನ ಗಂಡನಿಂದ ಮನೋಕ್ಲೇಶಕ್ಕೊಳಗಾಗಿ ತನ್ನ ಲೈಂಗಿಕ ಹಾಗೂ ಭಾವನಾತ್ಮಕ ಅಭಿವ್ಯಕ್ತಿಯನ್ನು ತನ್ನ ಸೇವಕಿ ರಾಬುಳಲ್ಲಿ ಕಂಡುಕೊಳ್ಳುವುದನ್ನು ಚಿತ್ರಿಸುತ್ತಾರೆ. ಈ ಕಥೆ ಸಲಿಂಗಕಾಮ ಸಂಬಂಧವನ್ನು ಹೊರತರುತ್ತದೆ ಎನ್ನುತ್ತಾ ವಿಮರ್ಶಕರು ಈ ಕಥೆಯನ್ನು ಅಸಹ್ಯ ಎನ್ನುತ್ತಾರೆ. ಜೊತೆಗೆ ಇಸ್ಮತ್ಳನ್ನು ಲಾಹೋರ್ನ ಕೋರ್ಟ್ಗೆ ಎಳೆದೊಯ್ಯುತ್ತಾರೆ. ಆದರೆ ಅಸಹ್ಯಕರ ಎನಿಸುವಂಥಹದ್ದು ಆ ಕಥೆಯಲ್ಲಿ ಕಾಣಬರಲಿಲ್ಲ ಎಂದು ಆ ಕೇಸ್ಅನ್ನು ವಜಾಗೊಳಿಸಲಾಗುತ್ತದೆ.

ತನ್ನ ಸಮುದಾಯದ ಸಾರ್ವಕಾಲಿಕ ಸ್ಥಿತಿಯನ್ನು ಪ್ರಾಮಾಣಿಕತೆ ಮತ್ತು ಧೈರ್ಯದಿಂದ ಬರಹದ ಮೂಲಕ ತಿಳಿಸುವುದೇ ಅವರ ಬರಹದ ಮುಖ್ಯ ಉದ್ದೇಶವಾಗಿತ್ತು. ಉರ್ದು ಸಣ್ಣ ಕಥೆಗೆ ವಿಶೇಷವಾದ ಸ್ವರೂಪ ಕೊಟ್ಟವರಲ್ಲಿ ಇವರೇ ಮೊದಲಿಗರು.

ಅಚ್ಚರಿ ಎಂದರೆ ಇಸ್ಮತ್ ತನ್ನ ಬರಹಗಳನ್ನು ಸಂಪ್ರದಾಯವಲ್ಲದ ತಂತ್ರದಲ್ಲಿ ಹೇಳಬಲ್ಲವರಾಗಿದ್ದರು. `ನನ್ನ ದಾರಿ ನಾನೇ ಕಂಡುಕೊಳ್ಳುತ್ತೇನೆ. ಯಾರೋ ಮಾಡಿಟ್ಟಿರುವ ರೆಡಿಮೇಡ್ ಲಾಡುಗಳನ್ನು ನಾನು ಯಾವತ್ತೂ ತಿನ್ನುವುದಿಲ್ಲ~ ಎಂದಿದ್ದರು ಅವರು. ಲೈಂಗಿಕತೆಯ ಬಗ್ಗೆ ಮುಚ್ಚುಮರೆಯಿಲ್ಲದೆ ಅದರಲ್ಲೂ ಹೆಣ್ಣಿನ ಲೈಂಗಿಕತೆಯ ಬಗ್ಗೆ ಪ್ರಾಮಾಣಿಕವಾಗಿ ನುಡಿಯುವ ಸಾಮರ್ಥ್ಯ ಅವರದಾಗಿತ್ತು.

ಫ್ರೆಂಚ್ ಸ್ತ್ರೀ ವಿಚಾರವಾದಿ ಜೂಲಿಯಾ ಕ್ರಿಸ್ತೆವಾ ಹೇಳಿರುವಂತೆ ಭಾಷೆಯನ್ನು `ಫೀಮೇಲ್ ಬಾಡಿ ಎಕ್ಸ್ಪ್ರೆಷ್ನ್~ಗೆ ಬಳಸಬೇಕು.

ಇಸ್ಮತ್ ಬಗ್ಗೆ ರಾಜೇಂದ್ರ ಸಿಂಗ್ ಬೇಡಿ ಹೇಳಿರುವುದನ್ನು ಗಮನಿಸಿ, `ಹೆಂಗಸಾಗಿ ಎಂತಹ ಕೃತಿಗಳನ್ನು, ಎಂಥ ವಾಕ್ಯಗಳನ್ನು ಆಕೆ ಬರೆದಿದ್ದಾಳೆ. ದಮ್ಮಯ್ಯ ನಿಜಕ್ಕೂ ನಾವು ಹಿಂದುಳಿವೆವು. ಇವಳ ಭಾಷೆ ಪಂಚೇಂದ್ರಿಯಗಳ ಅನುಭವವನ್ನು ಉಂಟುಮಾಡುತ್ತದೆ. ನಿಕೃಷ್ಟ ಮಾತುಗಳನ್ನು ಚಾಚೂತಪ್ಪದೆ ತನ್ನ ಬರವಣಿಗೆಯಲ್ಲಿ ಕಟ್ಟಿಕೊಡುವಂತಹ ಭಾಷೆಯಲ್ಲಿನ ಆಕೆಯ ಸ್ವಾತಂತ್ರ್ಯ ಉರ್ದು ಸಾಹಿತ್ಯದ ಇನ್ಯಾವ ಲೇಖಕರಲ್ಲೂ ಕಂಡುಬರುವುದಿಲ್ಲ.~

ಸಾಮಾಜಿಕ ಕಟ್ಟುಪಾಡುಗಳಲ್ದ್ದ್ದೂ ಸರಳವಾಗಿ ನಿಖರವಾಗಿ ನೋಡಿದ್ದನ್ನು ನುಡಿಯುವುದು ಅವರ ಬರಹದ ವಿಶೇಷ ಗುಣವಾಗಿತ್ತು. ಅವರನ್ನು `ಲೇಡಿ ಚಂಗೇಜ್ ಖಾನ್~ ಎಂದು ಮತ್ತೊಬ್ಬ ಲೇಖಕಿ ಖುರತ್ ಉಲ್-ಆಯಿನ್ ಹೈದರ್ ಕರೆದ್ದ್ದಿದೂ ಉಂಟು.
ಸ್ತ್ರೀಯನ್ನು ಹಿಂದೆಂದೂ ಕಂಡರಿಯದಂತಹ ದೃಷ್ಟಿಕೋನದಲ್ಲಿ ಚಿತ್ರಿಸಿದ ಅವರ ಕಥೆಗಳು ಹಲವಾರು ವಿಶೇಷ ಸಂಗತಿಗಳ ಸಂಗಮವಾಗಿರುವುದರಿಂದ ಬದುಕಿನ ಸಾಕಷ್ಟು ಆಯಾಮಗಳನ್ನು ಮುಂದಿಟ್ಟವು.

`ಘರ್ವಾಲಿ~ ಕಥೆಯ ಪಾತ್ರಧಾರಿಯಾದ ಲಾಜೋ, `ಜಡೆ~ ಕಥೆಯ ಅಮ್ಮ , `ಲಿಹಾಫ್~ನ ಬೇಗಂಜಾನ್ ಮೂಲಕ ಹೆಣ್ಣಿನ ವಿಭಿನ್ನ ಚಿತ್ರಣ ನೀಡಿದ ಉರ್ದು ಸಾಹಿತ್ಯದ ಮೊಟ್ಟಮೊದಲ ಸಾಹಿತಿ ಇಸ್ಮತ್. ಅರ್ಥಪೂರ್ಣ ಜೀವನ ನಡೆಸುವ ಹಕ್ಕು ಪ್ರತಿ ಮಾನವರ ಹಕ್ಕಾಗಬೇಕು. ಬದುಕಿನ ಅನುಭವಗಳನ್ನು ಪರಿಗಣಿಸಿ ಬಲಿಪಶುಗಳಾಗದೇ ತಮ್ಮದೇ ಕೆಲವು ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಗಟ್ಟಿತನವನ್ನು ಮಹಿಳೆಯರು ಅಳವಡಿಸಿಕೊಳ್ಳಬೇಕು.

ಹೆಣ್ಣಿನೊಳಗಿನ ಧ್ವನಿಗಳ ಲಾಲಿಸುವಿಕೆ ಮತ್ತು ಹೆಣ್ಣಿನ ಜೀವನ ಶಾಶ್ವತ ಕಪ್ಪು ಬಣ್ಣದ ವಿಶ್ವ ಅಲ್ಲ ಎಂದು ಮನವರಿಕೆ ಮಾಡುತ್ತಾ ಇಸ್ಮತ್ ಪುಕ್ಕಲರುಗಳಾಗಿ ದಿನನಿತ್ಯ ಅಳುತ್ತಿರುವ ಹೆಣ್ಣಿನ ಬಗ್ಗೆ ಬೇಸರ ಮಾಡಿಕೊಳ್ಳುವ ಸಾಕಷ್ಟು ಸಂಗತಿಗಳನ್ನು ತಿಳಿಸುತ್ತಾರೆ. ಬೇಗಂ ಜಾನ್ ಚಿತ್ರಣದ ಮೂಲಕ ಸಲಿಂಗ ಕಾಮ ಸಂಬಂಧವನ್ನು ಪ್ರೋತ್ಸಾಹಿಸುವುದು ಅಥವಾ ಧಿಕ್ಕರಿಸುವುದು ಅವರ ಕಾಳಜಿಯಾಗಿರಲಿಲ್ಲ. ಬದಲಿಗೆ ಹೆಣ್ಣಿನ ದೇಹಕ್ಕೂ ದೈಹಿಕ ಇಚ್ಛೆಗಳಿವೆ, ಏರಿಳಿತಗಳಿವೆ ಎಂದು ಸಮಾಜಕ್ಕೆ ತಿಳಿಸುವುದಾಗಿತ್ತು. ಹೆಲೆನ್ ಸೀಜೋ ತನ್ನ ಲೇಖನದಲ್ಲಿ, `ಹೆಣ್ಣು ತನ್ನ ದೇಹದ ಬಗ್ಗೆ, ದೇಹದ ವಾಣಿಯ ಬಗ್ಗೆ ಬರೆಯಬೇಕು~ ಎನ್ನುತ್ತಾರೆ. ಆದರೆ ಇಸ್ಮತ್ ವೈವಾಹಿಕ ಜೀವನ ಮತ್ತು ಅದರ ಟೊಳ್ಳುತನವನ್ನು ಬಹಿರಂಗಗೊಳಿಸುತ್ತಾರೆ.

ಹೆಣ್ಣಿನ ಅನುಭವಗಳನ್ನು ಎಂದಿಗೂ ಮಾನವ ಅನುಭವಗಳೆಂದು ಪರಿಗಣಿಸದ ವಾತಾವರಣದಲ್ಲಿ ಹೆಣ್ಣಿನ ವಾಸ್ತವ ಚಿತ್ರಣದ ಮೂಲಕ ಜೀವನದ ಪರಿಪೂರ್ಣತೆ ಈ ಅನುಭವಗಳಿಲ್ಲದೆ ಸಾಧ್ಯವೇ ಇಲ್ಲ ಎನ್ನುವಂತೆ ಮನವರಿಕೆ ಮಾಡಿಸಿದ್ದರು ಇಸ್ಮತ್.
ಕೇಟ್ ಮಿಲ್ಲೆಟ್ ತನ್ನ ಸೆಕ್ಷುಯಲ್ ಪಾಲಿಟಿಕ್ಸ್ (1969) ಪುಸ್ತಕದಲ್ಲಿ ಪುರುಷ ಪ್ರಧಾನ ಮೌಲ್ಯಗಳು ಹೆಣ್ಣನ್ನು ಬರಿಯ ರೊಮಾಂಟಿಕ್ ದೃಷ್ಟಿಯಿಂದ ಮಾತ್ರ ಚಿತ್ರಿಸುತ್ತವೆ. ಹೆಣ್ಣನ್ನು ಇದೇ ದೃಷ್ಟಿಕೋನದಿಂದ ಬಳಸಲಾಗುತ್ತದೆ. ಸಾಹಿತ್ಯದಲ್ಲಿಯೂ ಇದೇ ಮುಂದುವರಿಯಿತು ಎಂದು ಹೇಳುತ್ತಾರೆ. ಆದರೆ ಈ ಚಿತ್ರಣವನ್ನು 1940ರಲ್ಲಿಯೇ ಇಸ್ಮತ್ ಬದಲಾಯಿಸಿದ್ದರು. ಹೆಣ್ಣಿನ ಬದಲೀ ಚಿತ್ರಣವನ್ನು ತಮ್ಮ ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ್ದರು.

ಬಾಲ್ಯದಲ್ಲಿ ಸುತ್ತಮುತ್ತ ಕಂಡ ಕಡುಬಡತನದ ದೃಶ್ಯ ಮತ್ತು ಅದರಿಂದ ಉಂಟಾದ ಮಕ್ಕಳ ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯಗಳು ಕುಟುಂಬದಲ್ಲಿಯೇ ನಾಲ್ಕು ಗೋಡೆಗಳ ಮಧ್ಯೆ ಹೆಚ್ಚು ಸಂಭವಿಸುತ್ತವೆ. ಇಂಥಹ ವಿಭಿನ್ನ ಅನುಭವಗಳನ್ನು ಸಾಹಿತ್ಯದ ವಿಚಾರಧಾಟಿಯಲ್ಲಿ ಪರಿಗಣಿಸಿದ ಇಸ್ಮತ್ರನ್ನು ಪ್ರಜ್ಞಾವಂತ ಚಿಂತಕರು `ಉರ್ದು ಸಾಹಿತ್ಯದ ಅದೃಷ್ಟ~ ಎಂದಿದ್ದಾರೆ.

ಆದರೆ ಇಸ್ಮತ್ರ ಹೇಳಿಕೆ ಪ್ರಕಾರ ಅವರಿಗೆ ಆಗಿರುವಂಥಹ ಅವಮಾನಗಳು, ಸಹಿಸಲಾರದ ಬೈಗುಳಗಳನ್ನು ಹೆಣ ಕೇಳಿದರೆ ಅದೂ ನಿಬ್ಬೆರಗಾಗಿ ಓಡಿಬಿಡುತ್ತದೆ ಎಂದಿದ್ದಾರೆ.

ಹೆಣ್ಣಲ್ಲಿ ಗಂಡಸುತನ, ಗಂಡಸಿನಲ್ಲಿ ಹೆಣ್ತನವನ್ನು ಪ್ರತಿಬಿಂಬಿಸಿದ್ದಾರೆ ಅವರು. ಪರದಾಡುವ, ಚಡಪಡಿಸುವ ವಿಲವಿಲನೆ ಒದ್ದಾಡುವ ಗಂಡಸಿನ ಮನೋಸ್ಥಿತಿಯನ್ನು ಚಿತ್ರಿಸಿದ್ದಾರೆ.

ಹೆಣ್ಣಿನ ಅಸ್ತಿತ್ವ ಮತ್ತು ಅವಳ ನೆಲಸುವ ಮಧ್ಯೆ ಇರುವ ಒಡಕುಗಳ ಕುರಿತು ವಿಶ್ಲೇಷಿಸುತ್ತಾ ಹೆಣ್ಣಿನ ಅರಿವು ಬರಿಯ ಒಂದು ಆಲೋಚನೆಯಾಗಿ ಉಳಿಯಬಾರದು. ಬದಲಿಗೆ ಅದೊಂದು ಬಲಿಷ್ಠವಾದ ಜೀವನದ ಗಾಢ ವಾಸ್ತವತೆಯ ಅರಿವಾಗಬೇಕು ಎನ್ನುತ್ತಾರೆ ಇಸ್ಮತ್.

ಫೆಮಿನೈನ್ ಮತ್ತು ಫೆಮಿನಿಸ್ಟ್ ಇದರಲ್ಲಿ ಫೀಮೇಲ್ ಫೇಸ್ ಉತ್ತಮ ಎಂದು ಖ್ಯಾತ ಬರಹಗಾರ್ತಿ ಹೆಲೆನ್ ಶೋವಾಲ್ಟರ್ ಹೇಳುತ್ತಾರೆ. ಬರಿಯ ಹೆಂಗಸರಂತೆ ಉಳಿದು ಗಂಡಸರನ್ನು ಅನುಕರಿಸುವುದು, ಗಂಡಸರು ಹೇಳಿದ್ದನ್ನು ಸದಾ ಪ್ರತಿರೋಧಿಸುವುದು, ತನ್ನನ್ನು ತಾನೇ ಹುಡುಕಿಕೊಳ್ಳುವುದು ಹೆಣ್ಣಿನ ಜೀವನದ ಮೂರು ವಿಭಿನ್ನ ಬಗೆಗಳಂತಿವೆ. ಇದರಲ್ಲಿ ತನ್ನನ್ನು ತಾನು ಹುಡುಕಿಕೊಳ್ಳುವುದೇ ಉತ್ತಮ. ಇದನ್ನು ಇಸ್ಮತ್ ತನ್ನ ಸಾಹಿತ್ಯದಲ್ಲಿ ಈ ಹಿಂದೆಯೇ ಚಿತ್ರಿಸಿದ್ದರು. ಜೊತೆಗೆ ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಮಾನವೀಯ ಕಾಳಜಿಗಳ ದೃಷ್ಟಿಕೋನಗಳು ಅವರ ಕೃತಿಗಳಲ್ಲಿ ತುಂಬಿ ತುಳುಕುತ್ತವೆ.

ತನ್ನ ಬರಹಗಳನ್ನು ಎಲ್ಲರೂ ಮೆಚ್ಚಬೇಕೆಂಬ ಬಯಕೆ ಅವರಿಗಿರಲಿಲ್ಲ. ಜನಪ್ರಿಯತೆಗಾಗಿ ಕಥೆ ರಚಿಸದೇ ನಿತ್ಯ ಸತ್ಯದ ಅನಾವರಣದ ಕಥೆಗಳನ್ನು ರಚಿಸಿದ್ದು ಇಸ್ಮತ್. ಇಸ್ಮತ್ರ ಈ ಬರಹಗಳು ಹೊಸ ಚಿಂತನೆಯ ಬರಹಗಾರರನ್ನು ರೂಪಿಸುತ್ತವೆ. ಈಚೆಗೆ ಪಾಶ್ಚತ್ಯ ಸ್ತ್ರೀ ವಿಚಾರಧಾರೆಗಳು ಹೇಳುತ್ತಿರುವ ಸಂಗತಿಗಳನ್ನು ಅವರ ಸಿದ್ದಾಂತಗಳನ್ನು ಈ ಭಾರತೀಯ ಲೇಖಕಿ 1940ರ ದಶಕದಲ್ಲೇ ಮಂಡಿಸ್ದ್ದಿದಾರೆ.

ದೇಶ ವಿಭಜನೆಯಿಂದ ತೀವ್ರ ಆಘಾತಕ್ಕೊಳಗಾದ ಇಸ್ಮತ್ ತನ್ನ `ಜಡೆ~ ಕಥೆಯಲ್ಲಿ ತಾನು ಕಂಡ ಕೋಮು ಗಲಭೆಗಳ ಅಮಾನವೀಯ ಮುಖಗಳನ್ನು ಪರಿಚಯಿಸುತ್ತಾರೆ. ಆ ಸಮಯದ ಕ್ರೌರ್ಯದ ಪರಮಾವಧಿಯನ್ನು ಬಿಂಬಿಸುತ್ತಾರೆ. ಅದರಲ್ಲೂ ಅಮ್ಮನ ಕುರಿತಾದ ಅವರ ಚಿತ್ರಣ ಕಲ್ಲು ಹೃದಯಗಳಲ್ಲೂ ಕಂಬನಿಯುಂಟುಮಾಡುತ್ತದೆ.
ಈ ವಿಭಜನೆಯಿಂದ ಅವರು ಕಂಡುಕೊಂಡ ಸತ್ಯಗಳು ನಿಜಕ್ಕೂ ವೈಚಾರಿಕವಾಗಿವೆ.

ಧರ್ಮದೊಳಗಿನ ರಮ್ಯತೆ ಮತ್ತು ರಾಜ್ಯಾಡಳಿತದ ಸ್ವಾತಂತ್ರ್ಯ ಎರಡೂ ಮಣ್ಣುಪಾಲಾಗಿರುವುದನ್ನು ತಿಳಿಸುತ್ತಾರೆ. ಇಸ್ಮತ್, ಭಾರತ ತನ್ನ ಭೂಮಿ ಎನ್ನುತ್ತಾರೆ. ಬರಿಯ ನೆಲ ಮಾತ್ರವಲ್ಲ, ಸಂಸ್ಕೃತಿಯಲ್ಲೂ, ಆಚರಣೆಗಳಲ್ಲೂ ತನ್ನ ಪಾಲಿದೆ ಎನ್ನುತ್ತಾರೆ. `ನಾನು ಹೋಳಿಯಲ್ಲಿ ಬಣ್ಣ ಎರಚಿದರೆ ಅಥವಾ ದೀಪಾವಳಿಯಲ್ಲಿ ದೀಪ ಬೆಳಗಿಸಿದರೆ ನನ್ನ ಧರ್ಮ ಪಾಲನೆಯಲ್ಲಿ ಯಾವುದೇ ಅಡ್ಡಿಯಾಗುವುದಿಲ್ಲ. ಅದು ಎಂದಿಗೂ ಅಪರಾಧವಲ್ಲ. ನನ್ನ ಜನ್ಮಭೂಮಿ ಸಂಸ್ಕೃತಿ ಮತ್ತು ನನ್ನ ಧರ್ಮದ ಬಗ್ಗೆ ಎಂದಿಗೂ ನನಗೆ ಒಂದು ಅದಮ್ಯ ಪ್ರೀತಿಯಿದೆ~ ಎಂಬಂತಹ ಜಾತ್ಯತೀತ ವಿಚಾರವಂತಿಕೆಯನ್ನು ಇಸ್ಮತ್ ತೋರಿಸುತ್ತಾರೆ.

ಉರ್ದು ಸಾಹಿತ್ಯವನ್ನು ವಿಭಿನ್ನ ದಾರಿಗೆ ಕರೆದೊಯ್ದು ಈ ಲೇಖಕಿಯನ್ನು ಮಹತ್ವದ ಸಾಹಿತಿ ಎಂದು ಪರಿಗಣಿಸಿದರೆ ಯಾವುದೇ ತಪ್ಪಿಲ್ಲ. ಆದರೆ ಇವರನ್ನು `ಅಬ್ಸಿನ್~ ಎಂದು ಕರೆಯುವುದು ಸಾಹಿತ್ಯವಲಯದ ದುರಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.