ಭಾನುವಾರ, ಜೂನ್ 7, 2020
28 °C

ಮಂಗಳವಾರ, 9–5–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಹೆದ್ದಾರಿ ಪರಿವರ್ತನೆ ಕೇಂದ್ರಕ್ಕೆ ಶಿಫಾರಸು
ಬೆಂಗಳೂರು, ಮೇ 8– ಮೂರು ರಾಜ್ಯ ಹೆದ್ದಾರಿಗಳನ್ನು ತ್ವರಿತವಾಗಿ ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕೇಂದ್ರವೂ ಈ ಬಗ್ಗೆ ಆಸಕ್ತಿ ತೋರಿಸಿದೆ ಎಂದು ಲೋಕೋಪಯೋಗಿ ಸಚಿವ ಶಿವಾನಂದ ಕೌಜಲಗಿ ಅವರು ಇಂದು ಇಲ್ಲಿ ನುಡಿದರು.

ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಬೇಕೆಂಬ ಹದಿನೇಳು ಪ್ರಸ್ತಾವಗಳು ಕೇಂದ್ರದ ಮುಂದಿವೆ. ಇವುಗಳಲ್ಲಿ ಆದ್ಯತೆಯ ಮೂರು ರಸ್ತೆಗಳನ್ನು ಸೂಚಿಸಬೇಕೆಂಬ ಕೋರಿಕೆ ಮೇರೆಗೆ ಗುಂತಕಲ್‌– ಬಳ್ಳಾರಿ, ಬೆಳಗಾವಿ– ವಿಜಾಪುರ, ದೇವನಹಳ್ಳಿ– ಹೊಸಕೋಟೆ ನಡುವಿನ ರಸ್ತೆಗಳನ್ನು ಶಿಫಾರಸು ಮಾಡಲಾಗಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ತಿಳಿಸಿದರು.

 1981ರಿಂದ ರಾಜ್ಯದ ಒಂದು ಕಿಲೊಮೀಟರ್‌ ರಸ್ತೆಯೂ ರಾಷ್ಟ್ರೀಯ ಹೆದ್ದಾರಿಯಾಗಿಲ್ಲ. ಈ ವಿಚಾರದಲ್ಲಿ ರಾಜ್ಯಕ್ಕೆ ತೀರಾ ಅನ್ಯಾಯ ಆಗಿದೆ. ರಾಜ್ಯಕ್ಕೆ ನ್ಯಾಯ ದೊರಕಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈಗ ಸೂಚಿಸಿರುವ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತದೆ.

ಅನಿಲ ಸೋರಿಕೆ: ಇಬ್ಬರ ಸಾವು
ರಾಯಚೂರು, ಮೇ 8– ಕೊಪ್ಪಳ ಸಮೀಪದಲ್ಲಿರುವ ಕಿರ್ಲೋಸ್ಕರ್‌ ಫೆರೋಸ್‌ ಕಂಪನಿಯಲ್ಲಿ ನಿನ್ನೆ ರಾತ್ರಿ ಅನಿಲ ಸೋರಿ ಮಲ್ಲಯ್ಯ ಹಾಗೂ ಸಂತೋಷ್‌ ಕುಮಾರ್ ಎಂಬ ಕಾರ್ಮಿಕರಿಬ್ಬರು ಸ್ಥಳದಲ್ಲೇ ಮೃತಪಟ್ಟು ಇತರ 12 ಜನರು ಅಸ್ವಸ್ಥಗೊಂಡಿದ್ದಾರೆ.

ಅಸ್ವಸ್ಥಗೊಂಡವರನ್ನು ಹೊಸಪೇಟೆ ಆಸ್ಪತ್ರೆಗೆ ಸೇರಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.