ಶನಿವಾರ, ಜೂನ್ 6, 2020
27 °C

25 ವರ್ಷಗಳ ಹಿಂದೆ| ಮಂಗಳವಾರ, 23–5–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗೈನಿಂದ ಸಿಡಿದ ಬಣಕ್ಕೆ ಅರ್ಜುನ್‌ ಸಿಂಗ್‌ ಕಾರ್ಯಾಧ್ಯಕ್ಷ

ನವದೆಹಲಿ, ಮೇ 22 (ಪಿಟಿಐ)– ಕಾಂಗ್ರೆಸ್ (ಐ)ನಿಂದ ಸಿಡಿದ ಬಣದ ಕಾರ್ಯಾಧ್ಯಕ್ಷ ರನ್ನಾಗಿ ಅರ್ಜುನ್‌ ಸಿಂಗ್‌ ಅವರನ್ನು ಇಂದು ನೇಮಿಸಲಾಯಿತು. ಇದರೊಂದಿಗೆ ಕಾಂಗೈ ವಿಭಜನೆಗೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಎನ್‌.ಡಿ.ತಿವಾರಿ– ಅರ್ಜುನ್‌ ಸಿಂಗ್‌ ನೇತೃತ್ವದ ಪಕ್ಷವು ಸಾಂಸ್ಥಿಕ ಸ್ವರೂಪ ತಾಳಿದೆ.‌

ಪಕ್ಷದ ವಿವಿಧ ಸಾಂಸ್ಥಿಕ ಘಟಕಗಳನ್ನು ರಚಿಸುವ ಕಾರ್ಯವನ್ನು ಪಕ್ಷಾಧ್ಯಕ್ಷ ಎನ್‌.ಡಿ.ತಿವಾರಿ ಅವರು ಇಂದು ಆರಂಭಿಸಿದರು.

ಸೋನಿಯಾ ಗಾಂಧಿ ಅವರ ಒಲವು ಯಾರ ಕಡೆಗೆ ಎಂಬ ಕಾತರ ಭಿನ್ನಮತೀಯರ ವಲಯದಲ್ಲಿ ಕಂಡುಬಂದಿದೆ.‌

ಅಪರಾಧ ಕಾನೂನಿಗೆ ತಿದ್ದುಪಡಿ

ನವದೆಹಲಿ, ಮೇ 22 (ಯುಎನ್‌ಐ, ಪಿಟಿಐ)– ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಬಂಧಿತರಾದ ವ್ಯಕ್ತಿಗಳು ಜಾಮೀನು ಪಡೆಯಲು ಅವಕಾಶ ನೀಡುವ ಅಪರಾಧ ಕಾನೂನು ತಿದ್ದುಪಡಿ ಮಸೂದೆ(1995)ಯನ್ನು ಸರ್ಕಾರ ಇಂದು ರಾಜ್ಯಸಭೆಯಲ್ಲಿ ಮಂಡಿಸಿತು.

ನಾಳೆಗೆ ಅವಧಿ ಮುಕ್ತಾಯವಾಗಲಿರುವ ವಿವಾದಾತ್ಮಕ ಟಾಡಾ ಕಾಯ್ದೆಯ ಸ್ಥಾನವನ್ನು ಈ ಮಸೂದೆ ತುಂಬಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.